ಬಲೆಯ ಬೀಸಿದರು

Author : ಬಸವರಾಜ ಕಟ್ಟೀಮನಿ

Pages 256




Year of Publication: 1954
Published by: ಮೋಹನ ಪ್ರಕಾಶನ
Address: ಕೃಷ್ಣಮೂರ್ತಿಪುರಂ, ಮೈಸೂರು

Synopsys

ಬಸವರಾಜ ಕಟ್ಟೀಮನಿ ಅವರ ಕಾದಂಬರಿ -ಬಲೆಯ ಬೀಸಿದರು. ರಾಜಕೀಯ ವಿದ್ಯಮಾನಗಳು ಕಾದಂಬರಿಯ ವಸ್ತು. ವ್ಯಂಗ್ಯ-ವಿಡಂಬನೆ ಮೂಲಕ ರಾಜಕೀಯ ನಡೆಯನ್ನು ವಿಶ್ಲೇಷಿಸುವ ಲೇಖಕರ ದೃಷ್ಟಿಕೋನವು ಕಾದಂಬರಿಯ ಸುಗಮ ಓದಿಗೆ ಹಾಗೂ ಆಸಕ್ತಿ ಕೆರಳಿಸುವಿಕೆಯ ಅಂಶವಾಗುತ್ತದೆ. ರಾಜಕೀಯ ವಿದ್ಯಮಾನಗಳನ್ನು ಇಟ್ಟುಕೊಂಡೇ ಸಾಮಾಜಿಕ ಕಾದಂಬರಿ ಬರೆದ ಕನ್ನಡ ಕಾದಂಬರಿಕಾರರ ಪೈಕಿ ಬಸವರಾಜ ಕಟ್ಟೀಮನಿ ಪ್ರಮುಖರು. ಹೀಗಾಗಿ, ಇಲ್ಲಿಯ ಭಾಷೆ, ಕಥೆಯ ನಿರೂಪಣೆ, ರಾಜಕೀಯ ವಿದ್ಯಮಾನಗಳ ಸ್ವರೂಪ ಎಲ್ಲವೂ ಕುತೂಹಲಕಾರಿ ಅಂಶಗಳಾಗಿ ಗಮನ ಸೆಳೆಯುತ್ತವೆ.

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books