ಲೇಖಕಿ ಎ. ಪಿ. ಮಾಲತಿ ಅವರ ಕಾದಂಬರಿ ʼಬದಲಾಗದವರುʼ. ಪುಸ್ತಕದ ಬಗ್ಗೆ ಸ್ವತಃ ಲೇಖಕಿಯೇ ಹೇಳುವಂತೆ, “ಸಮಾಜದ ರೀತಿ, ನೀತಿ, ನಡವಳಿಕೆಗಳು, ನಂಬಿಕೆ, ಶ್ರದ್ಧೆಗಳು ಕಾಲಕಾಲಕ್ಕೆ ಬದಲಾಗುತ್ತಾ ಹೋದಂತೆ, ಹೊಸ ಸುಧಾರಣೆಯ ಅಲೆ ಬೀಸಿ ಹಳೆಯದು ಕೊಚ್ಚಿಹೋಗುತ್ತದೆ ಮತ್ತು ನೂತನ ಸಮಾಜದ ನಿರ್ಮಾಣವಾಗುತ್ತದೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ಸತ್ಯ ಸಂಗತಿ. ಮೊದಲಿಗಿಂತ ಭಿನ್ನವಾಗಿರದೆ ಅದು ಹೊಸ ರೂಪ ತಳೆದು ಸಮಾಜದಲ್ಲಿ ಪ್ರತಿಷ್ಠೆಯ ಸ್ಥಾನ ಪಡೆಯುವುದನ್ನು ನಾವು ನೋಡುತ್ತೇವೆ. ಮುಗ್ಧ ಜನರ ದೌರ್ಬಲ್ಯದೊಂದಿಗೆ ಆಟವಾಡುತ್ತ ಅವರನ್ನು ಮೋಸ, ವಂಚನೆಗಳಿಂದ ಶೋಷಿಸುವ ವಿವಿಧ ವರ್ಗಗಳ ಜನರ ಮುನವಾಡದ ಹಿಂದೆ ಇರುವುದು ಕೇವಲ ಶೋಷಣೆ ಒಂದೇ. ಸಮಾಜದ ಹುಳುಕನ್ನು ಬಯಲಿಗೆಳೆದು, ಮೂಢನಂಬಿಕೆಗಳನ್ನು ಹಳಿದು, ಶೋಷಕರನ್ನು ಖಂಡಿಸುವ ಪ್ರವೃತ್ತಿ ಇರುವ ಜನರು ಅಪರೂಪ. ಬದಲಾವಣೆ ಬೇಕೆನ್ನುವುದು ಮನುಷ್ಯ ಸ್ವಭಾವವಾದರೂ, ಎಲ್ಲಿಯವರೆಗೆ ನಾವು ವೈಜ್ಞಾನಿಕ ದೃಷ್ಟಿ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಬದಲಾವಣೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ರಚಿಸಿದ ಕಾದಂಬರಿ ʼಬದಲಾಗದವರುʼ. ಕಾದಂಬರಿಯಲ್ಲಿ ಬರುವ ಪಾತ್ರಗಳು, ಘಟನೆಗಳು ಕಾಲ್ಪನಿಕವಾದದ್ದು. ಯಾರನ್ನೂ ಉದ್ದೇಶಿಸಿ ಬರೆದಿಲ್ಲ” ಎಂದು ಹೇಳಿದ್ದಾರೆ.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE