ಗೀತಾ ನಾಗಭೂಷಣ ಅವರು ಬರೆದ ಕಾದಂಬರಿ-ಬದುಕು. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪಡೆದಿದೆ. ಕೆಳವರ್ಗದ ನಿರ್ಗತಿಕರ, ದೇವದಾಸಿಯರ ಬದುಕಿನ ಚಿತ್ರಣವನ್ನು ಕಲಬುರಗಿ ಜಿಲ್ಲೆಯ ಗ್ರಾಮ್ಯ ಭಾಷೆಯನ್ನು ಸಮರ್ಥವಾಗಿ ಬಳಸಿದ್ದು ಇಲ್ಲಿಯ ಹೆಗ್ಗಳಿಕೆ. ಸ್ತ್ರೀಸಮಾನತೆ, ಜಾತಿ ಮೌಢ್ಯತೆ, ಮೇಲ್ವರ್ಗ, ಕೇಳ ವರ್ಗಗಳ ರೀತಿ-ರಿವಾಜು, ಆಚಾರ-ವಿಚಾರ, ಪರ ನಿಲುವು, ಪ್ರಕೃತಿ ವರ್ಣನೆಗಳು ಗೀತಾ ಅವರ ಬರೆಹ ಶೈಲಿಯ ವಿಶೇಷಗಳು ಈ ಕಾದಂಬರಿಯಲ್ಲೂ ಕಾಣಬಹುದು.
ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...
READ MORE