‘ಬಾಳ ತರಂಗ’ ಕೃತಿಯು ರಘು ಕನುಗನಹಳ್ಳಿ ಅವರ ಕಾದಂಬರಿಯಾಗಿದೆ. ಇಲ್ಲಿನ ಪಾತ್ರಗಳು ನಮ್ಮ ನಡುವೆಯೇ ಇದ್ದು, ಬಿದ್ದು, ಎದ್ದು ಬರುವ ಸನ್ನಿವೇಶಗಳು ಭಾವಗಳ ರಸದಲ್ಲಿ ಮಿಳಿತವಾಗಿರುವಂತೆ ಕಾಣುತ್ತದೆ. ಜೀವನ ಎಂದ ಮೇಲೆ ಕಷ್ಟ ಸುಖಗಳ ಮಿಶ್ರಣ. ಇವೆಲ್ಲವನ್ನೂ ಬಾಳಬೇಕು. ಕತ್ತಲಿನ ಹಿಂದೆಯೇ ಪ್ರಜ್ವಲತೆಯು ಅಡಗಿ ಕುಳಿತಿರುವ ಹಾಗೇ, ಬಾಳಿನಲ್ಲಿ ಏಳುವ ತರಂಗಗಳು ಯಾವ ಪ್ರಭಾವವನ್ನು ಬೀರುತ್ತವೆ ಎಂಬುದು ಮುಖ್ಯವಾಗುತ್ತದೆ ಎನ್ನುತ್ತದೆ ಈ ಕಾದಂಬರಿ.