‘ಅವನೀತ’ ಕೃತಿಯು ಸಾಯಿಸುತೆ ಅವರ ಸಾಮಾಜಿಕ ಕಾದಂಬರಿಯಾಗಿದೆ. ಈ ಕೃತಿಯು 2008 ರಲ್ಲಿ ಮೊದಲನೇ ಮುದ್ರಣವಾಗಿದ್ದು ಇದು ಎರಡನೇಯ ಮುದ್ರಣವಾಗಿದೆ. ‘ಅವನೀತ’ ಎಲ್ಲಾ ಕಾದಂಬರಿಗಳಿಗಿಂತ ಭಿನ್ನವಾಗಿದ್ದು, ಮೊಬೈಲ್, ಕಂಪ್ಯೂಟರ್ ಇಲ್ಲದಿದ್ದ 1950-60ರ ಕಾಲಘಟ್ಟದಲ್ಲಿನ ಪುಟ್ಟ ಹಳ್ಳಿಯ ಕತೆ ಇದಾಗಿದೆ. ಇಲ್ಲಿ ಒಳಿತಿಗಾಗಿ ಹಂಬಲಿಸುವ ಅಪ್ಪಟ, ಭಾರತೀಯ ಸಂಸ್ಕೃತಿಯ ಪ್ರತೀಕ ಭಾಗೀರಥಿ, ಸೂಕ್ಷ್ಮ ಮನಸ್ಸಿನ ಗಾರ್ಗಿ, ಪೆದ್ದ, ರಂಗಣಿಯ ಬಾಲ್ಯ, ಪ್ರೀತಿ, ಸಂಘರ್ಷಗಳನ್ನು ಕಟ್ಟಿಕೊಟ್ಟಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಬಿದ್ದ ಭಾವನೆ , ಕುಸಿದ ಗೋಡೆಗಳು, ಒಳಗೆ ಎಷ್ಟೋ ನೆನಪುಗಳು ಹುದುಗಿ ಹೋಗಿದ್ದವು. ಗತಕಾಲದ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿತ್ತು ಶ್ರೀಕಂಠಯ್ಯನ ಮನೆ. ರಾತ್ರಿಯೆಲ್ಲ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ಗುಂಡಿಗಳಲ್ಲಿ ಅಲ್ಪ ಸ್ವಲ್ಪ ನೀರಿತ್ತು. ಬಾಯಾರಿದ ಭೂಮಿ ಬೊಗಸೆಯೊಡ್ಡಿ ಕುಡಿದು ದಣಿವಾರಿಸಿಕೊಂಡಂಗೆ ಕಂಡಿತು. ಭಾಗೀರಥಿಯ ಇಡೀ ಸಂಸಾರ ಮುದುಡಿ ಕೂತಿತ್ತು. ಬಸ್ಸಿನಲ್ಲಿ ಪೆದ್ದು ಮುಂಡೆದೇ’ ಸೀತಕ್ಕನ ದನಿ ಕೇಳಿಸಿತು. ಬಂದಿದ್ದು ನಾಲ್ಕಾರು ಪ್ರಯಾಣಿಕರು. ಎಲ್ಲ ಮರುಕ ಪಡುವವರೇ. ‘ನಿಶ್ಚಿಂತ ಪುರ’ವೆ ಜಗತ್ತೆಂದು ಭಾವಿಸಿದ ಹೆಣ್ಣು ಹೊರ ಪ್ರಪಂಚಕ್ಕೆ ಕಾಲಿಟ್ಟಿದ್ದು ವಿಸ್ಮಯವಲ್ಲ. ಸಮಸ್ಯೆ ಮತ್ತು ಅನ್ವೇಷಣೆ ಮುಖಾಮುಖಿಯಾಗಿತ್ತು' ಎನ್ನುವ ವಿಚಾರಗಳು ಈ ಕೃತಿಯಲ್ಲಿವೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE