ಅವನೇ ಅವಳ ಸೈನ್ಯ

Author : ಯಂಡಮೂರಿ ವೀರೇಂದ್ರನಾಥ್

Pages 180

₹ 135.00




Published by: ಸುಧಾ ಎಂಟರ್ಪ್ರೈಸಸ್ ಬೆಂಗಳೂರು

Synopsys

ತೆಲುಗು ಮೂಲದಲ್ಲಿ ಯಂಡಮೂರಿ ವೀರೇಂದ್ರನಾಥ್ ಅವರು ಬರೆದಿರುವ ಈ ಕಾದಂಬರಿಯನ್ನು ರಾಜಾ ಚೆಂಡೂರ್ ಕನ್ನಡಕ್ಕೆ ಅವನೇ ಅವಳ ಸೈನ್ಯ ಹೆಸರಿನಲ್ಲಿ ಅನುವಾದಿಸಿದ್ದಾರೆ. ‘ಅವಳು ‘ ಈ ಕಾದಂಬರಿಯ ನಾಯಕಿ ‘ಅವನನ್ನು ‘ ತನ್ನ ಸೈನ್ಯವನ್ನಾಗಿ ನೇಮಿಸಿದಳು.. ಸಂಪೂರ್ಣ ಸೈನ್ಯವೆಲ್ಲ ಅವನೊಬ್ಬನದೇ…!ಕೆಲಸ ಮಾತ್ರ ತುಂಬಾ ತುಂಬಾ ದೊಡ್ಡದು.. ಆದರೂ ಕೇವಲ ಅವನೊಬ್ಬನೆ ಮಾತ್ರ ನಿಭಾಯಿಸಿಕೊಂಡು ಹೋಗಬೇಕು.. ‘ಅವನು…!’ ದಿನವೊಂದಕ್ಕೆ ಲಕ್ಷಗಟ್ಟಲೇ ಸಂಪಾದಿಸುವ ಸ್ಟಾರ್ ನಟ…ಸಾವಿರಾರು ಜನರ ಆರಾಧ್ಯ ದೈವ.. ಅಷ್ಟು ಹಣ, ಕೀರ್ತಿಯನ್ನು ಗಳಿಸಿದರೂ ಅದೆಲ್ಲವನ್ನು ಬಿಟ್ಟು, ಅವಳಿಗಾಗಿ ಮೃತ್ಯು ಮುಖದೊಳಗೆ ಹೆಜ್ಜೆಯಿರಿಸಿದ …ಆತನೇ ಈ ಕಾದಂಬರಿಯ ನಾಯಕ.. ಅಬ್ಬಾ…. ನಾಯಕ, ನಾಯಕಿಯರ ಪರಿಚಯವೇ ಇಷ್ಟೊಂದು ಸೋಜಿಗವಿರಬೇಕಾದರೆ ಕಾದಂಬರಿಯ ಕಥಾ ವಸ್ತು, ನಿರೂಪಣಾ ಶೈಲಿಯಲ್ಲಿ ಎಷ್ಟೊಂದು ಸೊಗಸಿರಬಹುದು.. ಎಂದು ನೀವು ಊಹಿಸಿರಬೇಕಲ್ಲವೇ…? ಹೌದು.. ಯಾರ ಊಹೆಗೂ ನಿಲುಕದ ರಹಸ್ಯದರಮನೆಯಲ್ಲಿ ಹಲವಾರು ರಹಸ್ಯಮಯ ಮಜಲುಗಳನ್ನೊಳಗೊಂಡ ವರ್ಣರಂಜಿತ ಚಿಕ್ಕ ಚಿಕ್ಕ ಮಹಲುಗಳು.. ಕಥೆಯು ಸಿನೆಮಾದ ಚಿತ್ರೀಕರಣದೊಂದಿಗೆ ಪ್ರಾರಂಭವಾಗುತ್ತದೆ.. ಆ ಸಿನೆಮಾದ ನಾಯಕ ಪಾತ್ರ ದ ಹೆಸರು ಸುಬ್ಬರಾವ್…ರೌಡಿಗಳಿಂದ ತನ್ನ ಪತ್ನಿಯನ್ನು ರಕ್ಷಿಸಿಕೊಳ್ಳುವ ಹೋರಾಟದ ಸನ್ನಿವೇಶವದು.. ರೌಡಿ ಗಳೊಂದಿಗೆ ಹೋರಾಡುತ್ತಿರುವ ಸಂದರ್ಭದಲ್ಲಿ ಸುಬ್ಬರಾವ್ ನ ತಲೆಗೆ ಬಲವಾದ ಪೆಟ್ಟು ಬಿದ್ದು, ಆತನಿಗೆ ಪ್ರಜ್ಞೆ ತಪ್ಪಿತ್ತು…. ಮುಂದಿನ ಅನೂಹ್ಯ ಘಟನೆಗಳಿಗೆಲ್ಲ ಈ ಬೆಳವಣಿಗೆ ಪ್ರಾರಂಭದ ವೇದಿಕೆಯಾಗಿತ್ತು…ಎಲ್ಲಿಂದಲೋ ಆಂಬುಲೆನ್ಸ್ ಬಂದು ಸುಬ್ಬರಾವ್ ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತದೆ…. ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತಿದ್ದ ಹಾಗೆ ಎಚ್ಚರಗೊಂಡ ಆತ ತಾನು ಸುಪ್ರಸಿದ್ಧ ಸಿನೆಮಾ ತಾರೆ ನಾಯಕ ನಟ ಚೈತನ್ಯ ಎಂದು ಹೇಳಿಕೊಳ್ಳುತ್ತಾನೆ.. ಆದರೆ ಅವನ ಮಾತನ್ನು ಯಾರೂ ನಂಬುವುದಿಲ್ಲ…ಬದಲಿಗೆ “ ಪ್ಯಾರನಾಯಿಡ್ ಸೈಕಾಲಜಿ “ ಸಮಸ್ಯೆ ಆತನದು ಎನ್ನುವಂತೆ ಬಿಂಬಿಸಿ, ಆತನಿಗೆ ಶಾಕ್ ಟ್ರೀಟ್ಮೆಂಟ್ ಕೊಡಲು ಆರಂಭಿಸುತ್ತಾರೆ.. ಆತನನ್ನು ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸಿ, ಭ್ರಮೆಗೊಳಪಡಿಸಿದರೂ ಆತನ ಮನೋಸ್ಥೈರ್ಯ ಮಾತ್ರ ಕುಗ್ಗುವುದಿಲ್ಲ….. ನಕಲಿ ಪೊಲೀಸರ ಬಂದು ವಿಚಾರಣೆ ನಡೆಸುವುದು, ಇಲ್ಲದೇ ಇರುವ ಹೆಂಡತಿಯನ್ನು ಸೃಷ್ಟಿಸಿ ತಾನು ಸುಬ್ಬರಾವ್ ಅಥವಾ ಚೈತನ್ಯ ಇವೆರಡರಲ್ಲಿ ತಾನು ಯಾರು ಎಂಬ ಸಂದಿಗ್ಧತೆಯನ್ನು ಉಂಟುಮಾಡುವ ಪರಿ ಇದೆಯಲ್ಲ.. ಆ ಜಾಣ್ಮೆ ಅತ್ಯುತ್ತಮ ಲೇಖಕರ ಲೇಖನಿಯಿಂದಷ್ಟೇ ಒಡಮೂಡಲು ಸಾಧ್ಯ..ಹೀಗೆ ಕತೆ ಸಾಗುತ್ತದೆ..

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books