ಲೇಖಕ ರಾಮಚಂದ್ರ ಸಾಗರ್ ಅವರ ಕಾದಂಬರಿ ’ಅವಳ ಡೈರಿ’. ಕೃತಿಗೆ ಮುನ್ನುಡಿ ಬರೆದಿರುವ ನಾ. ಡಿಸೋಜ ಅವರು, ಓರ್ವ ಮುಂಬಯಿಯ ಡಾನ್ ಈ ಕಾದಂಬರಿಯ ನಾಯಕನಾಗಿರುವುದರಿಂದ ಕಾದಂಬರಿಯ ಉದ್ದಕ್ಕೂ ಕೊಲೆ, ವಿಷ ಪ್ರಾಶನ, ಪಿಸ್ತೂಲಿನಿಂದ ಗುಂಡು ಹಾರುವುದು, ಕೋರ್ಟಿನಲ್ಲಿ ಕೇಸು ನಡೆಯುವುದು, ಪೊಲೀಸ್ ಸ್ಟೇಷನ್ನಿನ ಭೇಟಿ, ಆತ್ಯಾಚಾರ, ಬೆತ್ತಲೆ ನೃತ್ಯಗಳು ಇತ್ಯಾದಿ ಪುಟ ಪುಟದಲ್ಲೂ ನಡೆಯುತ್ತದೆ. ಹೆಂಡದ ಗಡಂಗುಗಳಲ್ಲಿ ಬರೀ ಮೈಯಲ್ಲಿ ಕುಣಿಯುವ ಹೆಣ್ಣುಗಳು ಬರುತ್ತಾರೆ. ಹಾಗೆಯೇ , ಹೆಣ್ಣಿನ ಬದುಕಿನ ನಗ್ನ ಬದುಕು ಇಲ್ಲಿ ಕಾಣಿಸಿಕೊಂಡು ಇಂದಿನ ಸಮಾಜ ಹೆಣ್ಣನ್ನು ಹೇಗೆ ನೋಡಿಕೊಳ್ಳುತ್ತದೆ ಎಂಬುದನ್ನು ಇಲ್ಲಿ ಕಾಣಬಹುದಾಗಿದೆ. ಇದೆಲ್ಲಕ್ಕೂ ಸಹಾಯಕವಾಗಿ ಕಂಪ್ಯೂಟರ್, ಫೇಸ್ ಬುಕ್, ಇ-ಮೈಲ್ ಇತ್ಯಾದಿ ಆಧುನಿಕ ಯಂತ್ರಗಳು ತಮ್ಮ ಪಾತ್ರವಹಿಸುತ್ತವೆ. ಕಾದಂಬರಿಯ ಯಾವುದೇ ಪುಟ ತೆರೆದರೂ ಅಲ್ಲಿ ವಿಕಾರಗೊಂಡ ಆಧುನಿಕತೆಯ ಅಶ್ಲೀಲತೆಯನ್ನು ನಾವು ನೋಡುತ್ತೇವೆ ’ಎಂದಿದ್ದಾರೆ.
ಲೇಖಕ ರಾಮಚಂದ್ರ ಸಾಗರ್ ಅವರು ಶಿವಮೊಗ್ಗ ಜಿಲ್ಲೆಯ ಅನಲೆಕೊಪ್ಪದ ಸಾಗರದವರು. ಅವರು ಕವಿ, ಕತೆಗಾರ ಹಾಗೂ ಕಾದಂಬರಿಕಾರರು. ಕೃತಿಗಳು: ಅವಳ ಡೈರಿ ...
READ MORE