ಕತೆಗಾರ ಅಶೋಕ ಹೆಗಡೆ ಅವರ ಕಾದಂಬರಿ ’ಅಶ್ವಮೇಧ’. ಈ ಕಾದಂಬರಿಯ ಬಗ್ಗೆ ಹಿರಿಯ ವಿಮರ್ಶಕ ಜಿ.ಎಸ್. ಆಮೂರ ಅವರು ಹೀಗೆ ವಿಶ್ಲೇಷಿಸಿದ್ದಾರೆ-
ಅಶೋಕರ ಕಾದಂಬರಿಯನ್ನು ಓದುವಾಗ ಮೇಲಿಂದ ಮೇಲೆ ನೆನಪಾಗುವ ಕೃತಿಗಳೆಂದರೆ ಯು. ಆರ್. ಅನಂತಮೂರ್ತಿಯವರ ಭಾರತಿಪುರ ಹಾಗು ಶಾಂತಿನಾಥ ದೇಸಾಯಿಯವರ ಬೇಜ. ಆದರೆ ಜಗನ್ನಾಥ ಹಾಗು ಶ್ರೇಯಾಂಸರ ಬೌದ್ಧಿಕ ಆಸಕ್ತಿಗಳು ರಾಜೀವನಲ್ಲಿ ಇದ್ದಂತಿಲ್ಲ. ಅವನು ಕ್ರಾಂತಿಯಲ್ಲಿ ತೊಡಗಿಕೊಳ್ಳುವದು ಉದ್ದೇಶಪೂರ್ಣವಾಗಿ ಅಲ್ಲಿ. ಆದರೆ ಒಮ್ಮೆ ತೊಡಗಿಕೊಂಡ ನಂತರ ಸಂಪೂರ್ಣವಾಗಿ ಕ್ರಿಯಾಶೀಲನಾಗುತ್ತಾನೆ. ಅಶ್ವಮೇಧದ ಸಮಾಜ ಭಾರತೀಪುರ ಹಾಗು ಬೀಜಗಳ ಸಮಾಜಗಳಿಗೆ ಹೋಲಿಸಿದರೆ ಆಧುನಿಕತೆಯಿಂದ ಹೆಚ್ಚು ದೂರವಾದುದು. ಅಶ್ವಮೇಧದಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಘಟನೆಗಳಿಗೆ ಆಸ್ಪದವಿಲ್ಲ. ಅಶೋಕರು ವಲ್ಲೀಗದ್ದೆಯಂಥ ಹಳ್ಳಿಯನ್ನು ಆಯ್ದುಕೊಂಡುದುದು ಇದಕ್ಕೆ ಮುಖ್ಯಕಾರಣವೆಂದು ತೊರುತ್ತದೆ. ಅವರ ಕಾದಂಬರಿಯ ಧಾಟಿಯೂ ಅನಂತಮೂರ್ತಿ ಹಾಗು ದೇಸಾಯಿಯವರ ಕಾದಂಬರಿಗಳ ಧಾಟಿಗಿಂತ ಭಿನ್ನವಾಗಿದೆ. ಅಶೋಕರ ಕಾದಂಬರಿಯಲ್ಲಿ ಎದ್ದು ಕಾಣುವ ವಸ್ತುನಿಷ್ಟತೆ ಇರುವುದು ಅವರ ವೈಶಿಷ್ಟ್ಯವಾಗಿದೆ. ಇಲ್ಲಿಯ ಯಾವ ಪಾತ್ರಗಳೂ ಕೇಂದ್ರ ಪಾತ್ರಗಳಲ್ಲ. ಆದ್ದರಿಂದ ದೃಷ್ಟಿಕೋನವು ವಸ್ತುನಿಷ್ಟವಾಗಿದೆ.
ಕವಿ ಕಾದಂಬರಿಕಾರ ಅಶೋಕ ಹೆಗಡೆ 22 ಜುಲೈ 1967 ರಂದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಂಜಗೋಡ ಎಂಬಲ್ಲಿ ಜನಿಸಿದರು. ಬದುಕಿನ ಬೆರಗುಗಳನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅದನ್ನು ಕವಿತೆ, ಕಥೆ, ಕಾದಂಬರಿಗಳ ಮೂಲಕ ಮರುಶೋಧಿಸುವ ಕಥೆಗಾರ ಅಶೋಕ ಹೆಗಡೆ. ವೃತ್ತಿರಂಗದ ವಿಶಾಲ ಅನುಭವ – ಲೋಕಗ್ರಹಿಕೆ ಅವರ ಕಥೆಗಳಿಗೆ ವಿಭಿನ್ನ ಮೆರುಗು ನೀಡುತ್ತವೆ. ಪ್ರಕಟಿತ ಕೃತಿಗಳು: ಒಂದು ತಗಡಿನ ಚೂರು, ಒಳ್ಳೆಯವನು, ವಾಸನೆ ಶಬ್ದ ಬಣ್ಣ ಇತ್ಯಾದಿ (ಕಥಾಸಂಕಲನಗಳು), ಅಶ್ವಮೇಧ (ಕಾದಂಬರಿ), ಕುರುಡುಕಾಂಚಾಣ (ಅಂಕಣ ಬರಹಗಳು), ಭೂಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರದ ಎರಡು ಹೊಸ ದಾರಿಗಳು ...
READ MORE