ಆಶ್ರಯ

Author : ಕುಮಾರಸ್ವಾಮಿ ತೆಕ್ಕುಂಜ

Pages 120

₹ 120.00




Year of Publication: 2020
Published by: ಒಪ್ಪಣ್ಣ ನೆರೆಕೆರೆ ಪ್ರತಿಷ್ಠಾನ(ರಿ)
Address: ಅನುಗ್ರಹ, ಶಿವಗಿರಿನಗರ, ಕುಳಾಯಿ-ಹೊಸಬೆಟ್ಟು, ಮಂಗಳೂರು- 575019
Phone: 08242409563

Synopsys

‘ಆಶ್ರಯ’ ಕುಮಾರಸ್ವಾಮಿ ತೆಕ್ಕುಂಜ ಅವರ ಐತಿಹಾಸಿಕ ಕಾದಂಬರಿ. ಈ ಕೃತಿಗೆ ಪ್ರೊ. ಎ.ವಿ. ನಾವಡ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಆಶ್ರಯ ಕುಮಾರಸ್ವಾಮಿ ತೆಕ್ಕುಂಜ ಅವರ ಕಾದಂಬರಿ ಎಂದೂ ಹೇಳಬಹುದು. ಲಿಖಿತ ಚಾರಿತ್ರಿಕ ದಾಖಲೆಗಳನ್ನು ಕಲೆ ಹಾಕಿ, ಪರಿಶೀಲಿಸಿ, ಹರಿದು ಬಂದ ಬಾಯ್ಮಾತಿನ ಕಥನಗಳನ್ನು ಐತಿಹ್ಯಗಳನ್ನು ಬಳಸಿಕೊಂಡು ಕಾಲ್ಪನಿಕವಾದ ಕೆಲವೊಂದು ಪಾತ್ರಗಳನ್ನು, ಸನ್ನಿವೇಶಗಳನ್ನು ಹೊಸದಾಗಿ ಹೆಣೆದು ಕಾದಂಬರಿಯಾಗಿಸಿದ್ದಾರೆ. ಅಂದರೆ ಇಲ್ಲಿ ಚರಿತ್ರೆಯೇ ಹಂದರ. ಕಲ್ಪನೆ ಅಲ್ಲಿಯ ಬಳ್ಳಿಗಳು. ಈ ಬಗೆಯ ಕಾದಂಬರಿ ರಚಿಸುವ ಮುನ್ನ ಕಾದಂಬರಿಕಾರ ಸಾಕಷ್ಟು ಚರಿತ್ರೆ ಲೋಕದ ಒಳಹೊಕ್ಕು, ಅನ್ಯಾನ್ಯ ಆಕರಗಳನ್ನು ಶೋಧಿಸಿ ಬೇಕಾದ ಜೀವದ್ರವ್ಯಗಳನ್ನು ಯಥಾವತ್ತಾಗಿ ನಿರೂಪಿಸದೆ ಸಂಭವನೀಯಗಳನ್ನು ಕಲ್ಪನೆಯ ಮೂಸೆಯಲ್ಲಿಟ್ಟು ಪಾಕಗೊಳಿಸಬೇಕಾಗುತ್ತದೆ. ಈ ದಿಸೆಯಲ್ಲಿ ಕುಮಾರಸ್ವಾಮಿಯವರದು ಸಾರ್ಥಕ ಪ್ರಯತ್ನ ಎಂದಿದ್ದಾರೆ ನಾವಡ. ಹಾಗೇ ಕಥನಕಲೆ ಅವರಿಗೆ ಸೊಗಸಾಗಿ ಒಲಿದಿದೆ. ಇತಿಹಾಸವನ್ನು ಕಲಾತ್ಮಕ ಕುಸುರಿ ಕೆಲಸಕ್ಕೆ ತಂದು ಸಾಣೆಯೊಡ್ಡುವ ಜಾಣ್ಮೆ ಸಿದ್ಧಿಸಿದೆ. ಮುಂದೆ ಅವರು ಪ್ರಬುದ್ಧ ಕಾದಂಬರಿಕಾರರಾಗುವುದರಲ್ಲಿ ಸಂಶಯವಿಲ್ಲ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.

About the Author

ಕುಮಾರಸ್ವಾಮಿ ತೆಕ್ಕುಂಜ

ಕುಮಾರಸ್ವಾಮಿ ತೆಕ್ಕುಂಜ ಅವರು ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಂಬಯಿಯಲ್ಲಿ 'ಫಿಯಟ್ ಅಟೊಮೊಬೈಲ್ ಕಂಪೆನಿ'ಯ ತಾಂತ್ರಿಕ ವಿಭಾಗದಲ್ಲಿ ಮತ್ತು ಐದು ವರ್ಷ ಮಹಾರಾಷ್ಟ್ರದ ನಾಸಿಕದಲ್ಲಿ 'ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯಲ್ಲಿ ಕೆಲಸಮಾಡಿ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿ ನಲ್ಲಿರುವ 'ಜನರಲ್ ಮೋಟರ್ ಟೆಕ್ನಿಕಲ್ ಸೆಂಟರ್‌'ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ, ಹವಿಗನ್ನಡದ ಬ್ಲೊಗುಚ್ಛ 'ಒಪ್ಪಣ್ಣ. ಕಾಂ'ನಲ್ಲಿ 2011ರಿಂದ ಬರೆಯಲು ಆರಂಭಿಸಿದ್ದು, ಇದೀಗ, ನಿವೃತ್ತಿಯ ಅಂಚಿನಲ್ಲಿರುವ ಸಮಯದಲ್ಲಿ ಕನ್ನಡದಲ್ಲಿಯೂ ಬರೆಯಲು ತೊಡಗಿಸಿಕೊಂಡಿದ್ದಾರೆ. ದೇನೆ. ಕನ್ನಡ ಪೌರಾಣಿಕ ಕಾದಂಬರಿ 'ಮಂಡೋದರಿ' ...

READ MORE

Related Books