ಅನುಪಮ ಆಖ್ಯಾನ ಮತ್ತು ಇತರ ಕತೆಗಳು

Author : ಉಮೇಶ ದೇಸಾಯಿ

Pages 52

₹ 65.00




Published by: ಮೈತ್ರಿ ಪ್ರಕಾಶನ
Address: 504, 2ನೇ ಅಡ್ಡರಸ್ತೆ, 2ನೇ ಬ್ಲಾಕ್, ಬಿಎಸ್ ಕೆ 1ನೇ ಹಂತ, ಬೆಂಗಳೂರು-560050
Phone: 8317396164

Synopsys

ಅನುಪಮ ಆಖ್ಯಾನ -ಉಮೇಶ ದೇಸಾಯಿ ಅವರು ಬರೆದ ಇ-ಕಾದಂಬರಿ. ಈ ಕೃತಿಯು ಎರಡು ಭಾಗಗಳನ್ನು ಒಳಗೊಂಡಿದ್ದು ಭಾಗ-1 ರಲ್ಲಿ ಅನುಪಮ ಆಖ್ಯಾನ, ಭಾಗ-2 ರಲ್ಲಿ ಆಯ್ಕೆಗಳು, ಬಿಡುಗಡೆ, ದಾಟು, ದೀಪದ ಕೆಳಗಿನ ಕತ್ತಲೆ, ವಿದಾಯ ಶೀರ್ಷಿಕೆಗಳನ್ನು ಒಳಗೊಂಡಿದೆ. ಲೇಖಕರ ಇದುವರೆಗಿನ ಕತೆ, ಕಾದಂಬರಿಗಳಲ್ಲಿ ಕಂಡಂತಹ ಆಧುನಿಕ ಬದುಕಿನ ತಲ್ಲಣ, ತಳಮಳ, ತವಕವೇ ’ಅನುಪಮ ಆಖ್ಯಾನ’ ದಲ್ಲಿ ಕೂಡಾ ಕಂಡು ಬಂದಿದೆ. ಆದರೆ ವಿಷಮ ದಾಂಪತ್ಯ, ಅಪೂರ್ಣ ಬದುಕು, ಅಸುಖ ಕೌಟುಂಬಿಕ ವ್ಯವಸ್ಥೆಯ ಮುಂದುವರಿದ ಭಾಗದಂತೆ ಈ ನೀಳ್ಗತೆಯ ಭಾಗವನ್ನು ಇಲ್ಲಿ ಕಾಣಬಹುದು. ಈ ಕತೆಯ ನಾಯಕಿ ಅನುಪಮಾ ಈಗಿನ ಪೀಳಿಗೆಯ ಯುವತಿ. ಇವಳು ನೇರವಾಗಿ ಮುನ್ನೆಲೆಗೆ ಬಂದು ಕತೆ ಹೇಳುವುದಿಲ್ಲ ಬದಲು ಇವಳ ಮಾವ, ಅತ್ತೆ ಗಂಡ ಹಾಗೂ ಮ್ಯಾರೇಜ ಕೌನ್ಸಿಲರ್ ಹೀಗೆ ಅವಳ ಸುತ್ತಲಿನ ಜನ ಅನುಪಮಾಳ ಕತೆ ಹೇಳುತ್ತಾ ಹೋಗುತ್ತಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಎಲ್ಲವೂ ಓದುಗರ ಗಮನ ಸೆಳೆಯುತ್ತವೆ. 

About the Author

ಉಮೇಶ ದೇಸಾಯಿ
(27 July 1965)

ಹುಬ್ಬಳ್ಳಿಯಲ್ಲಿ ಜನಿಸಿದ ಉಮೇಶ ದೇಸಾಯಿ  ಸದ್ಯ ಬೆಂಗಳೂರಿನಲ್ಲಿ ಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ’ಚೌಕಟ್ಟಿನಾಚೆ’ ಕಥಾಸಂಕಲನ ಹಾಗೂ ’ಭಿನ್ನ’ ಕಾದಂಬರಿ ಪ್ರಕಟಿಸಿದ್ದಾರೆ.  ಸ್ವತಃ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದು  ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ.    ...

READ MORE

Related Books