'ಅಂತಃಪುರ' ಲೇಖಕಿ ವಸುಮತಿ ಉಡುಪ ಅವರ ಸಾಮಾಜಿಕ ಕಾದಂಬರಿಯಾಗಿದೆ. ಈ ಕಾದಂಬರಿ ಸುಧಾ ಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟವಾಗಿತ್ತು. ಈ ಕಾದಂಬರಿಯ ಕುರಿತು ಬರೆಯುತ್ತಾ ಕೊರೊನಾ ಸಂದರ್ಭ ಸೃಷ್ಟಿಸಿದ ಸಂಕಷ್ಟದ ಸನ್ನಿವೇಶದಿಂದ ಪ್ರಾರಂಭವಾಗುವ ಕಾದಂಬರಿಯು ಮಲೆನಾಡ ಪರಿಸರದ ಹಿನ್ನೆಲೆಯಲ್ಲಿ ವೈವಿಧ್ಯಮಯ ಮಾನವ ಒಳತೋಟಿಗಳನ್ನು ಓದುಗರ ಅಂತಃಕರಣ ಮಿಡಿಯುತ್ತಲೇ ಪ್ರಸ್ತುತ ಪಡಿಸಿರುವ ರೀತಿ ವಿಶಿಷ್ಟವಾದುದು ಎನ್ನುತ್ತಾರೆ ಕೆ.ಆರ್. ಉಮಾದೇವಿ ಉರಾಳ.
ಲೇಖಕಿ ವಸುಮತಿ ಉಡುಪ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ 1948 ಏಪ್ರಿಲ್ 18ರಂದು ಜನಿಸಿದರು. ತಾಯಿ ತ್ರಿಪುರಾಂಬ, ತಂದೆ ರಂಗಾಭಟ್ಟರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಕಥೆಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ವಿವಿಧ ಭಾಷೆಗೆ ಅನುವಾದಗೊಂಡಿವೆ. ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ವಸುಮತಿ ಅವರ ಪ್ರಮುಖ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ ಅವರ ಕತಾ ಸಂಕಲನ. ‘ಸೀತಾಳದಂಡೆ’ ಮತ್ತೊಂದು ಪ್ರಬಂಧ ಸಂಕಲನ. ಅವರ ಹಲವಾರು ಕತೆಗಳು ಹಿಂದಿ, ತೆಲುಗು ಭಾಷೆಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆಗೆ ‘ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ...
READ MORE