ಅನಾರ್ದ್ರ

Author : ಕಿಲಾರಾ ವಿಕ್ರಂ ಹೆಗಡೆ

Pages 164

₹ 150.00




Year of Publication: 2021
Published by: ಸ್ನೇಹ ಬುಕ್ ಹೌಸ್
Address: #165, 10 ನೇ ಮುಖ್ಯ ರಸ್ತೆ, ಶ್ರೀ ನಗರ ಬೆಂಗಳೂರು, 560050
Phone: 9845031335

Synopsys

ಲೇಖಕ ಕಿಲಾರಂ ವಿಕ್ರಂ ಹೆಗಡೆ ಅವರ ಚೊಚ್ಚಲ ಕೃತಿ ಅನಾರ್ದ್ರ . ಇದು ಪತ್ತೆದಾರಿ ಕಾದಂಬರಿ. ವಾಮಾಚಾರದ ಭಯ, ಬಂಗಿ ಪಾನಕದ ಅಮಲು, ರಕ್ತದ ಕಮಟು, ಕಾಮರೂಪ, ಪ್ರೀತಿಯ ಬೆಸುಗೆ, ವಾತ್ಯಲ್ಯದ ನೈಜ ವಾತಾವರಣ, ಮೋಸದ ಮೊಂಡುತನ, ರಾಜಕೀಯದ ಆಸೆ, ಹಣದ ದುರಾಸೆ ಇವೆಲ್ಲವೂ ಒಟ್ಟುಗೂಡಿ ಇದುವರೆಗೆ ತೆರೆದುಕೊಳ್ಳದ ಹೃದಯದ ಇನ್ನೊಂದು ಬಾಗಿಲನ್ನು ತೆರೆಸುತ್ತೆ ಎನ್ನುತ್ತದೆ ಈ ಕೃತಿ. ಜಗತ್ತು ಅಂದ್ರೆ ಕೇವಲ ಒಳ್ಳೆಯವರು ಅಥವಾ ಒಳ್ಳೆಯತನ ಮಾತ್ರ ಇರಬೇಕು ಅಂದ್ರೆ, ಬಹುಶಃ ಅದು ಕಲಿಯುಗಕ್ಕೇ ವಿರುದ್ಧವಾಗಿ ಬಿಡಬಹುದು, ಕೆಲವೊಂದಿಷ್ಟು ಘಟನೆಗಳನ್ನು ನೋಡಿ ನಾವು ಹೀಗೇ ಆಗ್ಬೇಕು ಅಂತ ಅಂದುಕೊಳ್ಳುತ್ತೇವೆ, ಅದೇ ಕೆಲವೊಂದಿಷ್ಟು ಘಟನೆಗಳನ್ನು ನೋಡಿ ನಾವು ಹೀಗಾಗಬಾರದು ಅನ್ನುವುದನ್ನ ಅರ್ಥ ಮಾಡಿಕೊಳ್ಳುತ್ತೇವೆ. ಪ್ರಸ್ತುತ ಕಾದಂಬರಿ ನಾವು ಹೇಗೆ ಆಗಬಾರದು ಅನ್ನುವುದರ ಕುರಿತು ಮನವರಿಕೆ ಮಾಡಿಕೊಡುತ್ತದೆ. ಥ್ರಿಲ್ ಬಯಸುವ ಪ್ರತಿ ಪುಟದಲ್ಲೂ ತಿರುವು ಬಯಸುವ, ಕಾದಂಬರಿಯಲ್ಲಿ ಮನೋರಂಜನೆಗೆ ಹೆಚ್ಚು ಒತ್ತು ಕೊಟ್ಟಿದೆ ಈ ಕಾದಂಬರಿ.

About the Author

ಕಿಲಾರಾ ವಿಕ್ರಂ ಹೆಗಡೆ
(18 June 2000)

ಲೇಖಕ ಕಿಲಾರಾ ವಿಕ್ರಂ ಹೆಗಡೆ ಮೂಲತಃ ಶಿರಸಿಯವರು. ಬರವಣಿಗೆ ಇವರ ಆಸಕ್ತಿ. ಪ್ರಜಾನುಡಿ ಪತ್ರಿಕೆಯ ಅಂಕಣಕಾರರಾಗಿದ್ದರು. ಪರಪಂಚ ಪಾಕ್ಷಿಕ ಮತ್ತು ಸುದ್ದಿಮಿತ್ರ ಆನ್ಲೈನ್ ಪತ್ರಿಕೆಯ ಪೂರ್ವ ಸಂಪಾದಕರಾಗಿದ್ದರು. ಪ್ರಸ್ತುತ  ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಬಿ.ಎ (ಅಂತಿಮ) ವ್ಯಾಸಂಗ ಮಾಡುತ್ತಿದ್ದಾರೆ ...

READ MORE

Related Books