ʼಆಡಿಸಿದಳೇಶೋಧೆʼ ಕಾದಂಬರಿಯು ಲೇಖಕಿ ರೇಖಾ ಕಾಖಂಡಕಿ ಅವರು ರಚಿಸಿದ್ದು, ಬದುಕಿನಲ್ಲಿ ಉದ್ಭವಿಸುವ ಅಲ್ಲೋಲ ಕಲ್ಲೋಲಗಳನ್ನು ತಾಳ್ಮೆಯಿಂದ ಧೃತಿಗೆಡದೆ ತಾನಂದುಕೊಂಡ ರೀತಿಯಲ್ಲಿ ಸಾಧಿಸುವ ಹೆಣ್ಣೊಬ್ಬಳ ಕತೆ ಇದು. ಬುದ್ದಿಮಾಂದ್ಯ ಹಾಗೂ ಅಂಗವಿಕಲ ಮಕ್ಕಳು ಅನುಭವಿಸುವ ಕಷ್ಟ, ಸಮಾಜ ಅವರನ್ನು ಕಾಣುವ ರೀತಿ ಕುರಿತು ಈ ಕಾದಂಬರಿ ಚಿತ್ರಿಸುತ್ತದೆ. ಸಮಾಜದ ನಕಾರಾತ್ಮಕತೆಗೆ ಹೆಚ್ಚು ಒತ್ತು ನೀಡಿದೆ.
ರೇಖಾ ಕಾಖಂಡಕಿಯವರು ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರು ಮೂಲತಃ ಬಾಗಲಕೋಟೆಯವರು. ಇವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ ಕೋಟಿ ಕಾದಂಬರಿಯು ಬಾಗಕೋಟೆಯ ಪರಿಸರದ ವಸ್ತು ಇರುವ ಕಾದಂಬರಿ. ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಬರೆದ ಕಾದಂಬರಿಗಳು ಬಂಧನ, ಅರುಣರಾಗ, ಹೊಸಹೆಜ್ಜೆ ಮುಂತಾದವುಗಳು. ಇವರ ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ದಟ್ಟ ಅನುಭವ, ಸಾಮಾಜಿಕ ಸ್ಥಿತ್ಯಂತರಗಳು ಮುಂತಾದವುಗಳೇ ವೈವಿಧ್ಯಮಯ ವಸ್ತುಗಳಾಗಿ, ಮೂಲದ್ರವ್ಯಗಳಾಗಿ ಪ್ರಕಟಗೊಂಡಿವೆ. ಆರುಣರಾಗ ಚಲನಚಿತ್ರವಾಗಿ ಪ್ರಖ್ಯಾತಿ ಪಡೆದಿದ್ದರೆ ಲಂಬಾಣಿಗಳ ...
READ MORE