ಅಭಯ ಕಾದಂಬರಿಯ ಕಥಾನಾಯಕಿ ಸೇತುಲಕ್ಷ್ಮಿ ಒಂದು ಕುಗ್ರಾಮದ ಪ್ರತಿಷ್ಠಿತ ಮನೆತನದಲ್ಲಿ ಜನಿಸಿದವಳು. ಶಾಲಾ ವಿದ್ಯಾಭ್ಯಾಸ ಮುಗಿದ ನಂತರ ದೂರದ ನಗರದಲ್ಲಿ ತಂದೆಯ ಮಿತ್ರ ಭಾಸ್ಕರ ಮೆನೊನ್ರವರ ಮನೆಯಲ್ಲಿದ್ದುಕೊಂಡು ಕಾಲೇಜು ಶಿಕ್ಷಣ ಮುಂದುವರೆಸುವಳು. ಜೊತೆಗೆ ಬರಹಗಾರ್ತಿಯೆನಿಸಿಕೊಳ್ಳುತ್ತಾಳೆ. ಕೊನೆಗೆ ಮೆನೂನ್ರವರ ಪುತ್ರ ಮುರಳಿಗೆ ಸೇತುಲಕ್ಷ್ಮಿಯನ್ನು ತಂದುಕೊಳ್ಳಲು ಅವರು ಯೋಚಿಸುತ್ತಿರುವಾಗ ಅದನ್ನು ನಿರಾಕರಿಸುತ್ತಾಳೆ. ನಂತರ ಕಾಲೇಜು ಅಧ್ಯಾಪಕಿಯಾದಾಗ ಅಲ್ಲಿನ ಪ್ರೊಫೆಸರ್ ಅವಳಿಂದ ಆಕರ್ಷಿತನಾಗಿ ವಿವಾಹವಾಗಲು ನಿರ್ಧರಿಸುತ್ತಾರೆ. ಅಷ್ಟರಲ್ಲಿ ಸೇತುಲಕ್ಷ್ಮಿಯ ಅಣ್ಣಂದಿರು ಬೇರೆ ಬೇರೆಯಾಗಿ ಮನೆಯ ವಾತಾವರಣ ಗಂಭೀರವಾಗುತ್ತದೆ. ವಿಧಿಯ ಕೈವಾಡ ಸೇತುಲಕ್ಷ್ಮಿ ಸ್ತನ ಕ್ಯಾನ್ಸರಿಗೆ ತುತ್ತಾಗುತ್ತಾಳೆ. ಪ್ರೊಫೆಸರ್ ಬಾಲಕೃಷ್ಣ ಅವಳನ್ನು ಸ್ವೀಕರಿಸಲು ಸಿದ್ಧನಾಗುತ್ತಾನಾದರೂ ಸೇತುಲಕ್ಷ್ಮಿ ತನ್ನ ಸ್ಥಿತಿಗೆ ರೋಸಿ ನಿಸ್ಸಹಾಯಕಳಂತೆ ತನ್ನ ಬಾಳನ್ನೇ ಕೊನೆಗಾಣಿಸುತ್ತಾಳೆ. ಇವೆಲ್ಲವನ್ನು ವಿವರವಾಗಿ ಓದಲು ಅಭಯ ಕಾದಂಬರಿಯನ್ನು ಓದಿ.