ಸಂಕಲ್ಪ ಎಂಬ ಕಾವ್ಯಾನಾಮದಿಂದ ಲೇಖಕ ಸದಾಶಿವ ಡಿ.ಓ. ಅವರು ರಚಿಸಿದ ಕಾದಂಬರಿ ʼಆನಂದ ಪುಷ್ಪʼ. ಸಾಹಿತಿ ಪ್ರೊ. ಎಂ ಕೃಷ್ಣೇಗೌಡ ಅವರು ಈ ಕೃತಿ ಕುರಿತು, ʼಮೃದು ಮಧುರ ಭಾವನೆಗಳ ಕುಸುರಿಯಿದೆ, ಜೀವನೋತ್ಸಾಹದ ಕೌಶಲವಿದೆ. ಮನುಷ್ಯ ಬದುಕಿನ ವಿವಿಧ ಆಯಾಮಗಳನ್ನು ಕಂಡರಿಸುವ ಕಲಾವಂತಿಕೆಯಿದೆ. ಕೇಡು -ಒಳಿತಿಗೆ ಶರಣಾಗಬೇಕೆಂಬ ಸದ್ಭಾವನೆಯಿದೆ. ಇದು ಭುವಿಯ ಬದುಕಿನ ಬಗೆಬಗೆ ಭಾವಧಾರೆಗಳ ಮಧುರಸಂಗಮ. ʻಋತವು ಗೆಲ್ಲಬೇಕೇ ವಿನಾ ಅನೃತವಲ್ಲ, ಪ್ರೀತಿಗೆ ಜಯವಾಗಬೇಕೇ ಹೊರತು ದ್ವೇಷಕ್ಕಲ್ಲʼ ಎಂಬುದು ಕಾದಂಬರಿಕಾರರ ಅಂತರ್ನಿಹಿತ ಮನೋವೃತ್ತಿಯಾಗಿದೆ.ʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.
`ಸಂಕಲ್ಪ' ಕಾವ್ಯನಾಮದ ಮೂಲಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಡಿ.ಓ ಸದಾಶಿವ ಅವರು ಜನಿಸಿದ್ದು 1986 ಜನವರಿ 14ರಂದು. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ದೇವಿಗೆರೆಯವರು. ತಾಯಿ ಪಾರ್ವತಮ್ಮ. ತಂದೆ ಓಂಕಾರಪ್ಪ. ಹುಟ್ಟೂರಾದ ಕಂಗುವಳ್ಳಿಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಹೊಸದುರ್ಗ ಸರ್ಕಾರಿ ಪದವಿ ಕಾಲೇಜಿನಿಂದ ಕಾಮರ್ಸ್ ವಿಷಯದಲ್ಲಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಹೊಸದುರ್ಗ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅಲಂಕಾರ-ಇವರ ಮೊದಲ ಕವನ ಸಂಕಲನ. ...
READ MORE