ಕಾದಂಬರಿಗಾರ್ತಿ ಅಶ್ವಿನಿ ಅವರ ಸಾಮಾಜಿಕ ಕಾದಂಬರಿ ‘ಆಕರ್ಷಿತ’. ಅವರ ಬರಹಗಳಲ್ಲಿ ವಿಶೇಷ ಆಕರ್ಷಣೆಯಿರುತ್ತದೆ. ಅವರ ಬೆಸುಗೆ, ವಿಸ್ಮೃತಿ, ಆಕರ್ಷಿತ ಮೊದಲಾದ ಕಾದಂಬರಿಗಳು ನಿತ್ಯ ನೂತನ ಎನ್ನುವುದರಲ್ಲಿ ಅನುಮಾನವೇ ಇಲ್ಲ. ' ಆಕರ್ಷಿತ ' ಕಾದಂಬರಿಯನ್ನು " ಸುಧಾ " ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿತ್ತು. ಪರಿಶುದ್ಧ ಪ್ರೇಮಕ್ಕೆ ಯಾವುದೇ ಬಂಧನವಿಲ್ಲ, ಗಡಿರೇಖೆಗಳ ಪರಿವೆಯಿಲ್ಲ ಎಂಬಂತೆ ಜಾತಿ,ಮತ,ಧರ್ಮ,ಭಾಷೆ, ದೇಶಗಳ ಮೇರೆ ದಾಟಿ ಬರಬಹುದಾದ ಅದ್ಭುತ ಪ್ರೇಮ ಕಥೆಯನ್ನು ಲೇಖಕಿ ’ಆಕರ್ಷಿತ " ಕಾದಂಬರಿಯ ಮೂಲಕ ಓದುಗರಿಗೆ ನೀಡಿದ್ದಾರೆ.
ಕಾದಂಬರಿಗಾರ್ತಿ ಅಶ್ವಿನಿ ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಂಗಲಂ ಎಂಬ ಗ್ರಾಮದಲ್ಲಿ. ತಂದೆ ವೆಂಕಟ ರಾಘವಾಚಾರ್ಯರು, ತಾಯಿ ಲಕ್ಷ್ಮಮ್ಮ. ರಾಮಾಯಣ, ಮಹಾಭಾರತ ಕಥೆಗಳನ್ನು ಮಿಡ್ಲೆ ಸ್ಕೂಲಿನಲ್ಲಿದ್ದಾಗಲೇ ಓದಿ ಮುಗಿಸಿದ್ದರು. ಇವರ ಓದಿನ ಆಸಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಯ್ಯನವರು ಹೆಚ್ಚಿನ ಪ್ರೋತ್ಸಾಹ ನೀಡಿದರು. ಅಕೌಂಟೆಂಟ್ರವರ ಕಚೇರಿಯಲ್ಲಿದ್ದಾಗಲೇ ಕಿರು ಪ್ರಹಸನಗಳನ್ನು ಆಕಾಶವಾಣಿಗಾಗಿ ಬರೆದು ಕೊಡತೊಡಗಿದ್ದರು. ಹೀಗೆ ಪ್ರಾರಂಭವಾದ ಇವರ ಸಾಹಿತ್ಯದ ಬರವಣಿಗೆ ಸಾಗುತ್ತಾ ಬಂದು ‘ನಿಲುಕದ ನಕ್ಷತ್ರ’ ಎಂಬ ಕಾದಂಬರಿ ರಚಿಸಿದರು. ನಂತರ ವೆಂಕಟೂವಿನ ಬುಗುರಿ, ತುಪ್ಪದ ದೀಪ,ನಾನೇಕೆ ಬೇಡವಾದೆ ಮುಂತಾದ ಇಪ್ಪತ್ತು ಕಥೆಗಳು ಸುಧಾ, ಮಯೂರ, ಪ್ರಜಾಮತ, ಕರ್ಮವೀರ ...
READ MORE