ಆಧುನಿಕ ಸಮಾಜದಲ್ಲಿ ನಡೆಯಿತ್ತಿರುವ ಬ್ಲಾಕ್ ಮೇಲ್ ಒಂದು ಎಳೆಯನ್ನಿಟ್ಟುಕೊಂಡು, ಅದರ ಹಿನ್ನೆಲೆಯನ್ನು ಈ ಕಾದಂಬರಿಯಲ್ಲಿ ಮನೋಜ್ಞವಾಗಿ ನಿರೂಪಿಸಿದ್ದಾರೆ ಲೇಖಕ ಯಂಡಮೂರಿ ವೀರೇಂದ್ರನಾಥರು. ಮಾನಸಿಕ ಘರ್ಷಣೆ, ಉಸಿರು ಬಿಗಿ ಹಿಡಿಯುವಂತಹ ಕ್ಲೈಮ್ಯಾಕ್ಸ್ ನಕಲಿ ಹಿಪ್ನಾಟಿಸಂ, ಮಾಫಿಯಾ ಕೇಂದ್ರಗಳ ಮೋಸ ಜಾಲಗಳ ನಡುವೆ ಮನುಷ್ಯ ಸಂಬಂಧಗಳನ್ನಿಟ್ಟುಕೊಂಡು ಲೇಖಕರುಆಡಿರುವ ಆಟವೇ ‘13 14 15’..
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE