`ಜೋಗತಿ' ಕೃತಿಯು ಅಪ್ಪಟ ಗ್ರಾಮೀಣ ಕತೆಯಾಗಿದ್ದು ವರ್ತಮಾನ ಕಾಲಘಟ್ಟದ ಜನರ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಬದುಕಿನ ಜೀವಂತ ಸಾಕ್ಷಿಗಳಾಗಿವೆ. ಹಳ್ಳಿಗಾಡಿನ ಸಮಾಜ, ಪ್ರೇಮ -ಕಾಮದ ಸಂಬಂಧಗಳು, ಬದುಕಿನ ವಿಭಿನ್ನ ಚಿತ್ರಣಗಳನ್ನು ಕೃತಿ ತೆರೆದಿಡುತ್ತದೆ ಮಾತ್ರವಲ್ಲ ಮಂಡ್ಯ ಜಿಲ್ಲೆಯ ಸಮಕಾಲೀನ ಸಾಮಾಜಿಕ ವ್ಯವಸ್ಥೆಯ ದಾಖಲಾತಿಯಾಗಿಯೂ ಮೂಡಿ ಬಂದಿದೆ.
ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು 3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...
READ MORE