‘ದಕ್ಕಿದ್ದು ಮಿಕ್ಕಿದ್ದು’ ಪಿ. ಶೇಷಾದ್ರಿ ಅವರ ಸಿನಿಮಾ ಯಾನದೊಳಗಿನ ಕಥೆಗಳ ಗಾಥೆಯಾಗಿದೆ. ಹಳ್ಳಿಯಿಂದ ಬಂದ ಸಾಮಾನ್ಯ ಬಾಲಕನೊಬ್ಬ ಕನ್ನಡ ಚಿತ್ರರಂಗದಲ್ಲಿ ಅಪೂರ್ವ ಸಾಧನೆಗೈದ ಅನುಭವ ಕಥನವನ್ನು ಈ ಪುಸ್ತಕ ಒಳಗೊಂಡಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳ ಮಾಲೆ ಹಾಗೂ ಅವರು ನಡೆದು ಬಂದ ಹಾದಿಯನ್ನು, ಅವರ ಸಿನಿಮಾಗಳು ಹುಟ್ಟಿದ ಹಿನ್ನೆಲೆಯನ್ನು ಸ್ವಾರಸ್ಯಕವಾಗಿ ಈ ಕೃತಿಯು ಹೇಳುತ್ತಿದೆ. ಇಲ್ಲಿ ಟೂರಿಂಗ್ ಟಾಕೀಸ್, ಮುಳುಗಿದ ಸೂರ್ಯನಡಿ ‘ಹೂವ’ನೆಂಬ ಅಭಿಮಾನಿ, ನಾನು ; ನನ್ನೂರು, ನನ್ನ ಶಾಲೆ, ‘ಕ’ ‘ಮ’ ‘ಲ’ ‘ಮ್ಮ’ ನಾಲ್ಕೇ ಅಕ್ಷರಗಳು, ಬಾಯಲ್ಲಿ ಬಿರುಗಾಳಿ; ಬೆರಳಲ್ಲಿ ಭೂಕಂಪ!, ನಾನೂ ಚಿತ್ರಕಥೆ ಹೇಳಿದೆ!, ಬೆಕ್ಕಿನ ಕೊರಳಿಗೆ ಗೆಂಟೆ ಕಟ್ಟಿದವ!, ಎಲ್ಲರಲ್ಲೂ ‘ಕಲಾವಿದ’ ಇದ್ದಾನೆ..., ಆಕೆ ನಟಿಯಾಗಲು ಬಯಸಿದ್ದಳು, ಆದರೆ, ಚಲನಚಿತ್ರೋತ್ಸವ ಮತ್ತು ನಾನು, ಹದಿನೇಳು ಸೆಕೆಂಡುಗಳ ರೋಮಾಂಚನ!, ನಾನು ಮತ್ತು ನನ್ನ ಸಿನಿಮಾ ನಂಟು, ‘ಮುನ್ನುಡಿ’ಯ ಹಿಂದು ಮುಂದು, ಅತಿಥಿ ಹುಟ್ಟಿದ ಕಥೆ, ಮಾಸ್ತಿಯವರ ‘ಸುಬ್ಬಣ್ಣ’ ತೆರೆಗೆ ಬಂದದ್ದು, ‘ಬೇರು’ ಬೇರು ಬಿಟ್ಟ ಪ್ರಸಂಗ, ಮಕ್ಕಳ ಚಲನಚಿತ್ರ ಹೇಗಿರಬೇಕು, ಕಾಶಿ, ಸಾಯಲು ಹೊರಟವರ ಕೊನೆಯ ತಾಣ!, ಹೂವಾಗು ಬೆಟ್ಟದಡಿ, ‘ಭಾರತ್ ಸ್ಪೋರ್ಸ್’ ಎಂಬ ಕಿರಾಣಿ ಅಂಗಡಿ, ಪ್ಯಾಟೆ ಹುಡ್ಗಿ ದ್ಯಾವಕ್ಕ ಆದ ಕತೆ!, ಒಂದು ಪ್ರಶ್ನೆ ಪತ್ರಿಕೆ!, ‘ವಿದಾಯ’ದ ವಿಷಾದಗಾಥೆ, ‘ಮೂಕಜ್ಜಿಯ ಕನಸುಗಳು’ ಕಾದಂಬರಿಯೂ ನನಗೆ ದಕ್ಕಿದ ಅಂಕವೂ, ನಾನೇಕೆ ಗಾಂಧಿ ಬಾಲ್ಯ ಕುರಿತ ‘ಮೋಹನದಾಸ’ ಚಿತ್ರ ಮಾಡಿದೆ?, ಮಿಕ್ಕಿದ್ದು, ಬೇಕು ನಮ್ಮ ಅಸ್ಮಿತೆಯ ಸಿನಿಮಾ, ‘ಕನ್ನಡ’ ಗೀತೆಯ ಗಾಥೆ! ಇವೆಲ್ಲವನ್ನೂ ಈ ಕೃತಿಯಲ್ಲಿ ಕಾಣಬಹುದು.
ಪಿ.ಶೇಷಾದ್ರಿ ಕನ್ನಡ ಚಲನಚಿತ್ರಗಳ ಪ್ರಮುಖ ನಿರ್ದೇಶಕ. ಕನ್ನಡ ಚಲನಚಿತ್ರ ರಂಗದಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಮೂಲಕ ಹೊಸ ಅಲೆಯನ್ನು ಸೃಷ್ಟಿಸಿ ಸತತ ಎಂಟು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರದವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಲೇ ಕನ್ನಡ ಭಾಷೆಯಲ್ಲಿ ಎಂ.ಎ. ಪದವಿಯನ್ನು, ಬರವಣಿಗೆಯಲ್ಲಿ ಆಸಕ್ತಿ ಇದ್ದುದರಿಂದ ಪತ್ರಕರ್ತನಾಗುವ ಬಯಕೆಯಿಂದ ಮೈಸೂರು ವಿಶ್ವವಿದ್ಯಾಲಯದಿಂದ ಜರ್ನಲಿಸಂನಲ್ಲಿ ಡಿಪ್ಲೊಮ ಕೂಡ ಪಡೆದರು. ತಮ್ಮ ವೃತ್ತಿ ಜೀವನವನ್ನು ‘ಸುದ್ದಿ ಸಂಗಾತಿ’ ವಾರಪತ್ರಿಕೆಯಲ್ಲಿ ಪತ್ರಕರ್ತನಾಗಿ ಆರಂಭಿಸಿ, ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದರು. 1985 ರಿಂದ ಸ್ವತಂತ್ರವಾಗಿ ದೂರದರ್ಶನ ಧಾರಾವಾಹಿ ಹಾಗೂ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಲು ಆರಂಭಿಸಿದರು. ಆ ...
READ MORE