ಸಮತ್ವ

Author : ಪದ್ಮಿನಿ ನಾಗರಾಜ್ ಎಸ್.ಪಿ.

Pages 164

₹ 150.00




Year of Publication: 2018
Published by: ನಿವೇದಿತ ಪ್ರಕಾಶನ
Address: #3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಖರಿ, 2ನೇ ಹಂತ, ಬೆಂಗಳೂರು-28
Phone: 9448733323

Synopsys

’ಸಮತ್ವ’ ಕೃತಿಯು ಪದ್ಮಿನಿ ನಾಗರಾಜು ಅವರ ಲೇಖನಗಳ ಗುಚ್ಛ. ಕೃತಿಗೆ ಬೆನ್ನುಡಿ ಬರೆದಿರುವ ಚಿನ್ನಸ್ವಾಮಿ ಸೋಸಲೆ ಅವರು, `ಸಾಹಿತ್ಯ ರಚನೆಯಲ್ಲಿ ಭೂಪಟದ ಸಾಹಿತ್ಯ ಹಾಗೂ ಭೂ ಪ್ರದೇಶದ ಸಾಹಿತ್ಯಗಳೆಂಬ ಎರಡು ರೀತಿಯ ಭಿನ್ನ ಭಿನ್ನ ಪ್ರಕಾರಗಳು ಇರುತ್ತವೆ. ಮೊದಲನೇಯ ಪ್ರಕಾರ ಎಲ್ಲೋ ನೋವಿರದ, ಸುಂದರವಾದ ಅಥವಾ ಪ್ರಶ್ನೆಯನ್ನೇ ಮಾಡದ ಒಪ್ಪಿತ ಸಾಹಿತ್ಯ ಪ್ರಕಾರ. ಆದರೆ ಎರಡನೆಯದು, ಭೂ ಪ್ರದೇಶದ ಸಾಹಿತ್ಯ ಪ್ರಕಾರಗಳು. ಈ ಪ್ರಕಾರದ ಸಾಹಿತ್ಯದಲ್ಲಿ ಬಡವ-ಶ್ರೀಮಂತ, ಮೇಲು ಕೀಳು, ಸ್ಪಶ್ಯ-ಅಸ್ಪಶ್ಯ, ಗಂಡು-ಹೆಣ್ಣು, ಮಾಲೀಕ-ಸೇವಕ, ಜಮೀನ್ದಾರ-ಜಮೀನು ಹೀನ, ಕರಿಯ-ಬಿಳಿಯ, ನಗರದವ-ಗ್ರಾಮದವ, ಪ್ರಭುತ್ವ ಮತ್ತು ಜನತೆ, ಸಾಮ್ರಾಜ್ಯ ಮತ್ತು ಸಂಸ್ಥಾನಗಳೆಂಬ ನೂರಾರು ಬಗೆಯ ಪ್ರಶ್ನೆಗಳು ತಮ್ಮ ತಮ್ಮ ಅಸ್ತಿತ್ವವನ್ನು ಹುಟ್ಟುಹಾಕಿ ಜನತೆಯ ವಸ್ತುನಿಷ್ಠವಾಗಿ ಚರ್ಚೆಗೆ ಎಡಯಾಗುತ್ತವೆ. ಎರಡನೆಯ ಪ್ರಕಾರದ ಜನಮುಖಿ ಚಿಂತನೆಯ ಅಂಶವನ್ನು ಪದ್ಮಿನಿ ನಾಗರಾಜು ಅವರು ತಮ್ಮ ಸಾಹಿತ್ಯ ಬರವಣಿಗೆಯಲ್ಲಿ ಅಳವಡಿಸಿಕೊಂಡಿದ್ದಾರೆ.

’ಸಮತ್ವ’ ಕೃತಿಯ ಹನ್ನೊಂದು ಶೀರ್ಷಿಕೆಗಳು ಹೀಗಿವೆ: ಹೆಣ್ಣುಮಕ್ಕಳ ಭಗವದ್ಗೀತೆ ರತ್ನಾಕರನ 'ಭರತೇಶ ವೈಭವ', ಜೈನ ಸಂಸ್ಕೃತಿಯ ಬೆಳವಣಿಗೆಗೆ ಮಹಿಳೆಯರ ಕೊಡುಗೆ, ಜನ್ನನ ಯಶೋಧರ ಚರಿತೆಯಲ್ಲಿ ಅಮೃತಮತಿಯ ಪಾತ್ರ, ಶ್ರವಣಬೆಳಗೊಳದ ಭಟ್ಟಾರಕ ಪರಂಪರೆ, 'ವಡ್ಡಾರಾಧನೆ'ಯಲ್ಲಿ ಮಹಿಳೆಯರ ಚಿತ್ರಣ, ಪ್ರಾಚೀನ ಕರ್ನಾಟಕದ ಜೈನ ನೆಲೆಗಳು-ಕನಕಗಿರಿ, ಜೈನ ಚಂಪೂ ಕಾವ್ಯಗಳಲ್ಲಿ ಋತು ವರ್ಣನೆ, ಮಹಾಕವಿ ರನ್ನ ಚಿತ್ರಿಸಿದ ಅತ್ತಿಮಬ್ಬೆ, ಮೈಸೂರು ಪ್ರಾಂತ್ಯದಲ್ಲಿ ಯಕ್ಷ-ಯಕ್ಷಿಯರ ಸ್ಥಳ ಹಾಗೂ ಪರಿಕಲ್ಪನೆ, ಸಮಾಜದ ಪ್ರಗತಿಯಲ್ಲಿ ಜೈನ ಮಹಿಳೆಯರ ಪಾತ್ರ, ಜೈನ ಚಂಪೂ ಕಾವ್ಯಗಳು.

About the Author

ಪದ್ಮಿನಿ ನಾಗರಾಜ್ ಎಸ್.ಪಿ.
(06 April 1966)

ಪದ್ಮಿನಿ ನಾಗರಾಜು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಗಂಗಾವತಿ, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ. ಸ್ನಾತಕೋತ್ತರ ಹಾಗೂ ಪಿಎಚ್‌.ಡಿ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ. ಪ್ರಸ್ತುತ 'ರಾಣಿ ಸರಳಾದೇವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಹಾಗೂ ‘ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಅನೇಕ ಲೇಖನ, ಕಥೆ, ಕವಿತೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣಕಾರ್ತಿಯಾಗಿಯು ಗುರುತಿಸಿಕೊಂಡಿದ್ದಾರೆ. 'ಗೆಳತಿಯಾಗುವುದೆಂದರೆ' (ಕವನ ಸಂಕಲನ), 'ಸಮಾಧಿ ಮೇಲಿನ ಹೂ' (ಕಥಾ ಸಂಕಲನ), 'ಅವ್ವ' (ಲಂಕೇಶರ ಆತ್ಮಚರಿತ್ರೆಯನ್ನು ಆಧರಿಸಿದ ನಾಟಕ), 'ಅರಿವಿನ ಮಾರ್ಗದ ಸೋಪಾನಗಳು-ಅನುಪ್ರೇಕ್ಷೆಗಳು' (ಸಂಶೋಧನೆ), ಕೃಷ್ಣಮೂರ್ತಿ ಕವತ್ತಾರ (ವ್ಯಕ್ತಿಚಿತ್ರ), ಸಮತ್ವ (ಪ್ರಬಂಧ ಸಂಕಲನ) ...

READ MORE

Related Books