ನಂಬಿಕೆಗಳು ಹೇಗೆ ಕೆಲಸ ಮಾಡುತ್ತವೆ?

Author : ಕೆ. ಪ್ರವೀಣ್ ನಾಯಕ್

Pages 120

₹ 135.00




Year of Publication: 2024
Published by: ಮಾನಸ ಪ್ರಕಾಶನ
Address: No. 67, ಈಸ್ಟ್ ಪಾರ್ಕ್ ರೋಡ್, 14ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು- 560 003
Phone: 806573029

Synopsys

`ನಂಬಿಕೆಗಳು ಹೇಗೆ ಕೆಲಸ ಮಾಡುತ್ತವೆ’ ಸುಶ್ಮಿತಾ ಪಿ ನಾಯಕ್ ಕಿಣಿ ಅವರ ಮೂಲ ಕೃತಿಯಾಗಿದ್ದು, ಕನ್ನಡಕ್ಕೆ ಪ್ರವೀಣ್ ನಾಯಕ್ ಕೆ. ಅವರು ಅನುವಾದಿಸಿದ್ದಾರೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ನಂಬಿಕೆಗಳು ಹೇಗೆ ಕೆಲಸ ಮಾಡುತ್ತವೆ ? ನಂಬಿಕೆಗಳ ಅವಶ್ಯಕತೆ ಹಾಗೂ ಅವುಗಳ ಶಕ್ತಿಯ ಒಳಗುಟ್ಟುಗಳನ್ನು ಈ ಪುಸ್ತಕದಲ್ಲಿ ಪ್ರಸ್ತುತ ಪಡಿಸಲಾಗಿದೆ. ದೇವರ ಮೆಲಿನ ನಂಬಿಕೆಯಿಂದ ಆಗುವ ಲಾಭ, ದೇವರನ್ನು ಯಾವ ರೀತಿಯಲ್ಲಿ ನಾವು ನೋಡಬೇಕು? ಹಾಗೂ ದೇವರನ್ನು ಒಲಿಸಿಕೊಳ್ಳುವುದು ಹೇಗೆ? ಮುಂತಾದವುಗಳ ಬಗ್ಗೆ ವಿವರಿಸಲಾಗಿದೆ. ಅದಲ್ಲದೇ ನಂಬಿಕೆಯ ದುರುಪಯೋಗ, ಆಧ್ಯಾತ್ಮ, ದೇವರ ಸಾಕ್ಷಾತ್ಕಾರ, ಸಮಾಧಿ ಸ್ಥಿತಿ ಹಾಗೂ ಜನನ, ಮರಣಗಳ ಬಗ್ಗೆ ಮನೋವಿಜ್ಞಾನ ಹಾಗೂ ವೈಚಾರಿಕ ದೃಷ್ಟಿಯಿಂದ ವಿವರಿಸಲಾಗಿದೆ. ಕೊನೆಯ ಭಾಗದಲ್ಲಿ ಕೆಲವು ಗಂಭೀರ ಮಾನಸಿಕ ಅಸ್ವಸ್ಥತೆಗಳು ಹಾಗೂ ಅವುಗಳನ್ನು ನಿಭಾಯಿಸುವ ಬಗ್ಗೆ ಕೆಲವು ಸಲಹೆಗಳನ್ನು ನೀಡಲಾಗಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಕೆ. ಪ್ರವೀಣ್ ನಾಯಕ್

ಕೆ. ಪ್ರವೀಣ್ ನಾಯಕ್ ಅವರು ಪತ್ರಿಕಾ ಛಾಯಾಗ್ರಾಹಕರಾಗಿ ಹಾಗೂ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುತ್ತಾರೆ. ಮನಃಶಾಸ್ತ್ರ ಹಾಗೂ ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ಮಾಡಿರುವ ಅವರು ಯೋಗ, ಧ್ಯಾನ, ಆಧ್ಯಾತ್ಮದಿಂದ ಹಿಡಿದು ಸಮ್ಮೋಹಿನಿಯವರೆಗೂ ನಾನಾ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಕೃತಿಗಳು: ಧ್ಯಾನ ನನ್ನ ಅನುಭವದಲ್ಲಿ, ಜಪ ನನ್ನ ಅನುಭವದಲ್ಲಿ, ರಾಜ್ ಕುಮಾರ್ ಒಂದು ಬೆಳಕು, ದೇವರು ಧರ್ಮ, ಏನಿದರ ಮರ್ಮ ...

READ MORE

Related Books