ಕನ್ನಡತನ

Author : ಸರ್ಜಾಶಂಕರ ಹರಳಿಮಠ

Pages 364

₹ 440.00




Year of Publication: 2024
Published by: ಪ್ರಗತಿ ಪ್ರಕಾಶನ
Address: ಜಯನಗರ, ವಿಶ್ವವಿದ್ಯಾಲಯ ರಸ್ತೆ , ಕಲಬುರಗಿ\n
Phone: 9449619162

Synopsys

‘ಕನ್ನಡತನ’ ಡಾ. ಸರ್ಜಾಶಂಕರ್ ಹರಳಿಮಠ ಅವರ ಕನ್ನಡ ಆಸ್ಮಿತೆಯ ಶತಮಾನದ ಚಿಂತನೆಗಳು ವಿಷಯದ ಮೇಲಿನ ಸಂಶೋಧನಾ ಮಹಾಪ್ರಬಂಧವಾಗಿದೆ. ಇಲ್ಲಿ 'ಜಾತಿ, ಭಾಷೆ, ಧರ್ಮ ಮತ್ತು ಸ್ಥಳೀಯತೆ' ಎಂಬ ಭಾರತೀಯ ಸಮಾಜದ ನಾಲ್ಕು ಮಹತ್ ಚಾಲಕ ಶಕ್ತಿಗಳು ಇಂದು ಸೃಷ್ಟಿಸುತ್ತಿರುವ ಬಿಕ್ಕಟ್ಟುಗಳನ್ನು ಒಂದೇ ವಿಷಯದಡಿ ಚರ್ಚಿಸಲು ಸಾಧ್ಯವೇ ಎನ್ನುವುದಕ್ಕೆ ಉತ್ತರವಿದೆ. ಸಂಶೋಧಕರಿಗೆ ಇರುವ ಓದು, ವಿಶ್ಲೇಷಣಾ ಸಾಮರ್ಥ್ಯ, ಪೂರ್ವಗ್ರಹಗಳಿಲ್ಲದ ನಿಲುವು, ಈ ಮಹಾಪ್ರಬಂಧಕ್ಕೆ ಗಟ್ಟಿತನವನ್ನು ಕೊಟ್ಟಿದೆ. ಸಂಸ್ಕೃತ, ಇಂಗ್ಲಿಷ್‌ಗಳ ನಡುವೆ 'ಕನ್ನಡ ನುಡಿಯ ಬಗೆಗಿನ ಚಿಂತನೆ'ಯನ್ನು ಅಕಾಡೆಮಿಕ್, ನಾನ್ ಅಕಾಡೆಮಿಕ್, ಆ್ಯಕ್ಟಿವಿಸ್ಟ್‌ಗಳ ಮೂಲಕ ಕಂಡುಕೊಳ್ಳಲು ಪ್ರಯತ್ನಿಸಿರುವುದು ಕನ್ನಡದ ಸಂಶೋಧನೆಯ ಮಟ್ಟಿಗೆ ಇದು ಮೊದಲ ಪ್ರಯತ್ನ. ಕನ್ನಡದ ಅಸ್ಮಿತೆಯ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಈ ಮಹಾಪ್ರಬಂಧ ತೋರಿದ ಮಾರ್ಗ ಅನುಕರಣೀಯವಾಗಿದೆ. ರಾಷ್ಟ್ರೀಯವಾದಿ ಚಿಂತನೆಗಳಿಗೆ ಪರ್ಯಾಯವಾದ ಮಾರ್ಗವನ್ನು ಕನ್ನಡ ದೇಶೀಯವಾಗಿಯೇ ಹುಡುಕಿಕೊಂಡ ಬಗೆಯನ್ನು ಈ ಮಹಾಪ್ರಬಂಧದಲ್ಲಿ ಚರ್ಚಿಸಲಾಗಿದೆ.

About the Author

ಸರ್ಜಾಶಂಕರ ಹರಳಿಮಠ
(04 June 1971)

ಲೇಖಕ, ಚಿಂತಕ, ಡಾ. ಸರ್ಜಾಶಂಕರ್ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಉದ್ಯೋಗವರಸಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಬಹುರಾಷ್ಟ್ರೀಯ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ಒಂದು ದಶಕದ ಕಾಲ ಸೇವೆ ಸಲ್ಲಿಸಿದ ನಂತರ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿ ಶಿವಮೊಗ್ಗದಲ್ಲಿ  ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಕೈಮಗ್ಗದ ಉಡುಪುಗಳೂ ಸೇರಿದಂತೆ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ದೇಸಿ ಸಂಸ್ಖೃತಿ’ ಎಂಬ ಮಾರುಕಟ್ಟೆ ಕೇಂದ್ರವನ್ನು ಆರಂಭಿಸಿದರು. ಜತೆ ಜತೆಗೆ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಲೇ ಕುವೆಂಪು ...

READ MORE

Related Books