ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಅವರು ಕೊಪ್ಪಳ ಜಿಲ್ಲೆಯ ವದಗನಹಾಳ ಗ್ರಾಮದವರು. ಅಪ್ಪಟ ಮೊಘಲಾಯಿಯ ಗ್ರಾಮೀಣ ಪ್ರತಿಭೆ. ಎರಡನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದರು. ಗವಿಮಠದಲ್ಲಿ ಶಿಕ್ಷಣ ಪೂರೈಸಿ 30 ವರ್ಷಗಳಿಂದ ಜೈನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಓದುವಿಕೆ ಅವರ ಹವ್ಯಾಸ. ಸಣ್ಣ ಕತೆ ಅವರ ಆರಂಭದ ಸಾಹಿತ್ಯ ಪ್ರಕಾರ. ಕತೆ, ಪುರಾಣ ಕಾವ್ಯ ರಚನೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತದ ಪ್ರಾಧ್ಯಾಪಕರಾಗಿ, ಗಣಿತದ ಸಂಶೋಧನೆಯನ್ನು ಕನ್ನಡದಲ್ಲಿ ಮಾಡಿದ್ದಾರೆ.
ಬುಕ್ ಬ್ರಹ್ಮ ಪ್ರಸ್ತುತಪಡಿಸುವ ಮುಖಾ-ಮುಖಿ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕೋರಗಲ್ ವಿರೂಪಾಕ್ಷಪ್ಪ ಅವರು ತಮ್ಮ ಸಾಹಿತ್ಯ, ಬರವಣಿಗೆ, ಸಂಶೋಧನೆ ಜೊತೆಗೆ ತಮ್ಮ ಬದುಕಿನ ಕುರಿತಾದ ಹಲವಾರು ಮಹತ್ವಪೂರ್ಣ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.