ಜಾನಪದ ಸಂಶೋಧಕ, ಲೇಖಕ ಹನಿಯೂರು ಚಂದ್ರೇಗೌಡ ಅವರ ಜನಾಂಗೀಯ ಅಧ್ಯಯನ ಕೃತಿ ʻಸೋಲಿಗರು: ಬದುಕು ಮತ್ತು ಸಂಸ್ಕೃತಿʼ. ಬೆಟ್ಟ-ಗುಡ್ಡಗಳಲ್ಲಿ ವಾಸಿಸುವವರು ಎಂಬ ಅರ್ಥ ಕೊಡುವ ಗಿರಿಜನ ಜನಾಂಗಗಳಲ್ಲಿ ಮುಖ್ಯರಾಗಿ ಕಂಡು ಬರುವವರು ಸೋಲಿಗರು. ಆಧುನಿಕ ಯುಗದ ಓಟದ ನಡುವೆಯೂ ಇಂಥ ಬುಡಕಟ್ಟು ಜನಾಂಗದವರು ತಮ್ಮ ಸಂಸ್ಕೃತಿಯೊಂದಿಗೆ ಅಂದಿನಂತೆಯೇ ಸಂಪೂರ್ಣವಾಗಿ ದೇಸೀಯವಾದ ಬದುಕನ್ನು ನಡೆಸುತ್ತಿದ್ದಾರೆ. ಬದಲಾವಣೆಯನ್ನು ಒಪ್ಪದ, ನಾಗರಿಕರನ್ನು ಕಂಡರೆ ದೂರಹೋಗುವ ಇವರನ್ನು ಸಾಮಾಜಿಕ, ಭೌಗೋಳಿಕ, ನೈಸರ್ಗಿಕ, ಪಾರಂಪರಿಕ ಹಾಗೂ ಧಾರ್ಮಿಕ ಹೀಗೆ ವಿಭಿನ್ನ ನೆಲೆಗಳಲ್ಲಿ ಅಧ್ಯಯನ ಮಾಡಿ ಅವರ ಬದುಕನ್ನು ಹನಿಯೂರು ಚಂದ್ರೇಗೌಡ ಅವರು ತಮ್ಮ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.
ಲೇಖಕ ಹನಿಯೂರು ಚಂದ್ರೇಗೌಡ ಮೂಲತಃ ಚನ್ನಪಟ್ಟಣದವರು. ಬಿಎಡ್., ಎಂ.ಎ., ಎಂ.ಫಿಲ್., ಪಿಎಚ್ಡಿ., ಡಿ.ಲಿಟ್., ಪಿಜಿಡಿಟಿಎಚ್. ಪದವೀಧರರು. ಕರ್ನಾಟಕ ಬುಡಕಟ್ಟು ಪರಿಷತ್ತಿನ ಸಂಸ್ಥಾಪಕರೂ, ಬರಹಗಾರ, ನಟ, ರೇಡಿಯೋ ಜಾಕಿ, ಸಂದರ್ಶಕರೂ ಹೌದು. ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯ ಕೇಂದ್ರಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಜಾನಪದ, ಅಲೆಮಾರಿ ಬುಡಕಟ್ಟು,ಸೋಲಿಗ, ಮಲೆ ಕುಡಿಯ, ಜೇನು ಕುರುಬ, ಕಾಡು ಗೊಲ್ಲ, ಹಂದಿ ಜೋಗಿ, ಸುಡುಗಾಡು ಸಿದ್ಧ, ದೊಂಬ್ಬ, ಹಕ್ಕಿ ಪಿಕ್ಕಿ, ದುರ್ಗ ಮುರ್ಗಿ, ಬುಡುಬುಡಿಕೆ, ಕೋಲೆ ಬಸವ ಹೀಗೆ ವಿವಿಧ ಬಡಕಟ್ಇಟ ಸಮೂಹಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಕಿರುತೆರೆ ಚಿತ್ರಗಳಲ್ಲೂ ನಟಿಸಿದ್ದಾರೆ. ಕೃತಿಗಳು: ವಿಚಾರ ವಿಹಾರ (ಸಂಪಾದನೆ) ಪ್ರಶಸ್ತಿ-ಪುರಸ್ಕಾರಗಳು: ರಾಷ್ಟ್ರೀಯ ಯುವ ಕೆಂಪೇಗೌಡ ...
READ MORE