About the Author

ಕವಯಿತ್ರಿ ಸುಕನ್ಯಾ ಕಳಸ (ಜನನ: 13-05-1960) ಚಿಕ್ಕಮಗಳೂರಿನ ಕಳಸದವರು. ತಂದೆ ಎಚ್.ಪುಟ್ಟದೇವರಯ್ಯ, ತಾಯಿ ನಾಗಮ್ಮ. ಕಳಸದಲ್ಲಿ ಹೂಸ್ಕೂಲ್ ಶಿಕ್ಷಣ, ಶಿವಮೊಗ್ಗದಲ್ಲಿ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ. ಪದವೀಧರರು. ಅಂಚೆ ಇಲಾಖೆಯಲ್ವಿಲಿ ಉದ್ಯೋಗ. ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದ ಎಂ.ಎ. ಪದವೀಧರರು. 2006 ಮಾರ್ಚ್‌ನಲ್ಲಿ ಸ್ವಯಂ ನಿವೃತ್ತಿ. ಇವರು ಬರೆದ ಭಾವಗೀತೆಗಳಿಗೆ ಎಚ್.ಆರ್. ಲೀಲಾವತಿಯವರಿಂದ ರಾಗ ಸಂಯೋಜನೆ, ಮಂಗಳೂರು ಆಕಾಶವಾಣಿಯಿಂದ ಪ್ರಸಾರ. ಹಲವಾರು ರಚನೆಗಳು ದೂರದರ್ಶನದಲ್ಲಿ ಪ್ರಸ್ತುತ. ನಾಟಕದಲ್ಲಿ ಅಭಿನಯ, ನಿರ್ದೇಶನದ ಅನುಭವ. ಜಾನಪದ ಗೀತಗಾಯನದಲ್ಲಿ ವಿಶೇಷ ಪರಿಶ್ರಮ. ಶಾಸ್ತ್ರೀಯ ಸಂಗೀತದಲ್ಲೂ ಪರಿಣತಿ ಇದೆ. ಪ್ರಥಮ ಕವನ ಸಂಕಲನ ‘ಗತದೊಂದಿಗೆ ಸ್ವಗತ’ ಮತ್ತು ‘ಭಾನುವಾರವೆಂದರೆ…’ ಮತ್ತು ಪ್ರಬಂಧ ಸಂಕಲನ ‘ಕಂಪ್ಯೂಟರ್ ಕುಟ್ಟಿ’ ಪ್ರಕಟವಾಗಿವೆ. ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪುರಸ್ಕೃತರು. ‘ಭಾನುವಾರವೆಂದರೆ…’ ಕವನ ಸಂಕಲನಕ್ಕೆ ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ ಲಭಿಸಿದೆ. 

ಸುಕನ್ಯಾ ಕಳಸ

(13 May 1960)