ವಿಬಂಧ

Author : ರಾಜಶೇಖರ ಮಠಪತಿ (ರಾಗಂ)

Pages 174

₹ 120.00




Year of Publication: 2009
Published by: ಶ್ರುತಿಲೋಕ ಪ್ರಕಾಶನ
Address: #2384, 3ನೇ ಮೈನ್, 5ನೇ ಕ್ರಾಸ್, ನ್ಯೂಕಾಂತ ರಾಜೇ ಅರಸ್ ರಸ್ತೆ, ಕೆ. ಜಿ ಕೊಪ್ಪಲು ಮೈಸೂರು
Phone: 9008798406

Synopsys

‘ವಿಬಂಧ’ ಕೃತಿಯು ರಾಜಶೇಖರ ಮಠಪತಿ ಅವರ ಲೇಖನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ನವಾಬ್ ಬೇಲೂರು ಅವರು, ‘ಯಾವುದೇ ಒಬ್ಬ ಲೇಖಕನ ಕೃತಿಯು ಭಾವಾಭಿವ್ಯಕ್ತಿಯ ಆಳ, ಹರವು, ಭಾವ ಆಶಯಗಳನ್ನು ಕಳಕಳಿ-ಕಾಳಜಿಗಳನ್ನು, ಮಾನವೀಯ ನೆಲೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಅಧ್ಯಯನ ಮಾಡಿ ಕೃತಿಯಲ್ಲಡಗಿರುವ ಬೆಳಕಿನ ಕೋಲುಗಳನ್ನು ಕತ್ತಲಲ್ಲಿ ಕಳೆದುಹೋಗುತ್ತಿರುವ ಮನಸ್ಸುಗಳೆಡೆ ಒಡ್ಡಿ, ಅದರ ಹೊಳಪಲ್ಲಿ ಸಮಾಜವನ್ನು ಬೆಳಗಿಸಿಕೊಳ್ಳಲು ಪ್ರೇರೇಪಿಸುವುದಿದೆಯಲ್ಲ, ಅದೊಂದು ಅದ್ಭುತ ಕಲೆ. ಅಂತಹ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಜಶೇಖರ ಪಠಪತಿಯವರದು ಸಮಾಜಮುಖಿ ಚಿಂತನೆಯಾಗಿದೆ. ಇನ್ನು ಈ ಕೃತಿಯಲ್ಲಿನ ಲೇಖನಗಳನ್ನು ಓದಿದಾಗ ಪೂರ್ವಗ್ರಹಪೀಡಿತರಾಗದೆ ಭವಿಷ್ಯದ ಬೆಳಕಿನ ಅನ್ವೇಷಣೆಯಲ್ಲಿ ನಿರತರಾಗಿರುವ ವೈಚಾರಿಕ ತಳಮಳ ತಲ್ಲಣಗಳು ಅನುಭವಕ್ಕೆ ಬರುವುದನ್ನು ಕಾಣಬಹುದು’ ಎಂದಿದ್ದಾರೆ.

About the Author

ರಾಜಶೇಖರ ಮಠಪತಿ (ರಾಗಂ)

ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ  ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...

READ MORE

Related Books