ವೀರಶೈವ ತತ್ವ ಸಿದ್ಧಾಂತಗಳನ್ನು ಒಂದೆಡೆ ತಂದು ಅಧ್ಯಯನ ಯೋಗ್ಯವಾಗುವಂತೆ ಮಾಡುವ ಉದ್ದೇಶದೊಂದಿಗೆ ಸಾಹಿತಿ ಶಿ.ಶಿ. ಬಸವನಾಳ ಅವರು ಸಂಪಾದಿಸಿದ ಕೃತಿಯೇ -ವೀರಶೈವ ತತ್ವ ಪ್ರಕಾಶ. ನಾಡಿನ ವಿವಿದೆಡೆಯ ವಿದ್ವಾಂಸರಿಂದ ಆಹ್ವಾನಿಸಿದ ಲೇಖನಗಳನ್ನು ಸಂಪಾದಿಸಿದ್ದು, ಕೃತಿಯಲ್ಲಿ ಚೆನ್ನಮಲ್ಲಿಕಾರ್ಜುನಪ್ಪನವರು, ಹರ್ಡೇಕರ ಮಂಜಪ್ಪನವರು, ಶಾಂತಾದೇವಿ ಮಾಳವಾಡ, ಚಂದ್ರಶೇಖರ ಶಾಸ್ತ್ರಿಗಳು, ರಂನಾಥ ದಿವಾಕರ, ಮಹಾದೇವಿ ಸ್ವಾಮಿಗಳು ಸರ್ಪಭೂಷಣಮಠ, ಅ.ನ.ಕೃಷ್ಣರಾಯರು, ಎಸ್.ಸಿ.ನಂದೀಮಠ ಸೇರಿದಂತೆ ಇತರೆ ಗಣ್ಯರು ಬರೆಹಗಳನ್ನು ಇಲ್ಲಿ ಮಂಡಿಸಿದ್ದಾರೆ.
ಸಾರ್ವಜನಿಕ ಬದುಕು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ ಅವರು ವಚನ ಸಾಹಿತ್ಯ ಮತ್ತು ವೀರಶೈವ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. 1893ರ ನವೆಂಬರ್ 7ರಂದು ಜನಿಸಿದ ಅವರ ತಂದೆ ಶಿವಯೋಗಪ್ಪ ತಾಯಿ ಸಿದ್ಧಮ್ಮ. ಮೆಟ್ರಿಕ್ ಪರೀಕ್ಷೆ (1910) ಮುಗಿಸಿದ ನಂತರ ಪುಣೆಗೆ ತೆರಳಿದ್ದು, ಅಲ್ಲಿಯ ಡೆಕ್ಕನ್ ಕಾಲೇಜಿನಲ್ಲಿ ಎಂ. ಎ. (1915) ಪೂರ್ಣಗೊಳಿಸಿದರು. ಸರ್ಕಾರಿ ಕೆಲಸಕ್ಕೆ ಸೇರದೆ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಧಾರವಾಡದಲ್ಲಿ ಕೆಎಲ್ಇ ಸೊಸೈಟಿ ಸ್ಥಾಪಿಸಿ, ಕೆಲವು ಕಾಲ ಧಾರವಾಡದ ಆರ್. ಎಲ್. ಎಸ್. ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿ, ಲಿಂಗರಾಜ ಕಾಲೇಜಿನಲ್ಲಿ ...
READ MORE