ವೈದಿಕ ಯಕ್ಷ

Author : ನಾರಾಯಣ ಗಿಂಡೀಮನೆ

Pages 375

₹ 550.00




Year of Publication: 2022
Published by: ಯುವಸಾಧನೆ
Address: #729, 'ಗ್ರೀನೀ' 23ನೇ ಅಡ್ಡರಸ್ತೆ, ಐಡಿಯಲ್ ಹೋಮ್ಸ್, ರಾರಾಜೇಶ್ವರಿನಗರ, ಬೆಂಗಳೂರು-560098.
Phone: 7975330868

Synopsys

ಯಕ್ಷ-ಯಕ್ಷಿಯರು ಎಂಬ ಹೆಸರು ಕರ್ಣಪಟಲದ ಮೇಲೆ ಬಿದ್ದ ತಕ್ಷಣ ಜೈನಧರ್ಮದಲ್ಲಿ ಬರುವ ಯಕ್ಷ-ಯಕ್ಷಿಯರು, ಕಾಳಿದಾಸನ ‘ಮೇಘ ಸಂದೇಶ’ ಕಾವ್ಯದಲ್ಲಿ ಬರುವ ಅಲಕಾನಗರದ ಶಾಪಗ್ರಸ್ತ ಯಕ್ಷ ಮತ್ತು ಆತನ ಪ್ರೇಯಸಿ ಯಕ್ಷಿಗೆ ಮೇಘದ ಮೂಲಕ ಕಳುಹಿಸುವ ಸಂದೇಶವೇ ನೆನಪಿಗೆ ಬರುತ್ತವೆ. ಜೈನಧರ್ಮದಲ್ಲಿ ಪ್ರತಿ ತೀರ್ಥಂಕರರಿಗೂ ಇಬ್ಬರಂತೆ 48 ಜನ ಯಕ್ಷ-ಯಕ್ಷಿಯರಿದ್ದಾರೆ. ಆದರೆ ವೈದಿಕ ಧರ್ಮದಲ್ಲಿ ಯಕ್ಷ-ಯಕ್ಷಿಯರೆಂದರೆ ಎಲ್ಲರಿಗೂ ಬೆರಗು ಮೂಡುವುದು ಸಹಜ. ಹಿಂದೂ ಧರ‍್ಮಿಕ ಪುರಾಣದ ಕಲ್ಪನೆಯಲ್ಲಿ ಯಕ್ಷ-ಯಕ್ಷಿಯರು ದೇವತೆಗಳ ಒಂದು ಪಂಗಡ. ಇವರಿಗೆ ನಮ್ಮ ದೇಶದ ಹಲವೆಡೆ, ಪ್ರತ್ಯೇಕ ದೇವಾಲಯಗಳೋ, ಪೂಜಾಸ್ಥಳಗಳೋ, ಇರುವ ಬಗ್ಗೆ ದಾಖಲೆಗಳಿವೆ. ಯಕ್ಷ ಎಂಬ ಪದಕ್ಕೆ ಆವಾಸ್ತವ, ಕಲ್ಪನೆ, ಮನಸಿಗೆ ನಿಲುಕದ್ದು, ಬಿಡಿಸಲಾಗದ್ದೆಂಬ ಪದಗಳು ಚಿತ್ತದ ಎದುರು ಮೂಡಿ ನಿಲ್ಲುವುದು ಸಹಜ. ಆದರೆ ಇಂತಹ ಯಕ್ಷ ಪ್ರಶ್ನೆಗೆ ನಾರಾಯಣ ಗಿಂಡೀಮನೆಯವರು ವೈದಿಕಯಕ್ಷ ಪರಂಪರೆಯ ಬಗ್ಗೆ ಹೊಸ ದಾರಿಯನ್ನು ನಿರ್ಮಿಸಿ ಬರೆದುಕೊಟ್ಟು, ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ನೂರಾರು ಗ್ರಂಥಗಳನ್ನು ಅಧ್ಯಯನ ಮಾಡಿ, ಹಲವಾರು ಸಂಶೋಧನೆಗಳ ಮೂಲಕ ಸಂಗ್ರಹಿಸಿ ‘ವೈದಿಕ ಯಕ್ಷ ಹಲವು ರೂಪಾಂತರಗಳು’ ಕೃತಿಯನ್ನು ಮೌಲ್ಯಯುತವಾಗಿ ಕಟ್ಟಿಕೊಟ್ಟಿದ್ದಾರೆ.

About the Author

ನಾರಾಯಣ ಗಿಂಡೀಮನೆ

ಹತ್ತಾರು ಕಥೆಗಳು  ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಥಮ ಬಹುಮಾನ. ಹಲವಾರು ಲೇಖನಗಳು, ಫೋಟೋ ಬರಹಗಳು, ಪ್ರವಾಸ ಕಥನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೈಯಕ್ತಿಕ ಕಥಾಸಂಕಲನ ಪ್ರಕಟವಾಗಿಲ್ಲ. 'ಕಲ್ಲರಳಿ ಹೂವಾಗಿ ' ಅಷ್ಟದಳ' ಇತ್ಯಾದಿ ಸಂಕಲನದಲ್ಲಿ ಕೆಲವು ಕಥೆಗಳು ಸೇರ್ಪಡೆಯಾಗಿವೆ. ...

READ MORE

Related Books