‘ಉರಿಪಾದ’ ಲೇಖಕ ಡಾ. ಹೆಚ್.ಡಿ. ಉಮಾಶಂಕರ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಪತ್ರಕರ್ತ ಡಿ.ಉಮಾಪತಿ ಹಾಗೂ ಡಾ.ಎಸ್. ತುಕಾರಾಮ್ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಡಾ.ಎಚ್.ಡಿ. ಉಮಾಶಂಕರ್ ಅವರ ಬರೆಹಗಳನ್ನು ಪ್ರಜಾವಾಣಿಯಲ್ಲಿ ಓದಿ ಬಲ್ಲವನಾಗಿದ್ದೆ. ದಮನಿತ ಜನ ಸಮುದಾಯಗಳ ಹಸಿವು, ನೋವು, ಅವಮಾನ, ಅಸಹಾಯಕತೆ ಕುರಿತ ಅವರ ಕಳಕಳಿ ತಳಮಳಗಳ ಪರಿಚಯವಿತ್ತು. ಆಂದೋಲನ ಪತ್ರಿಕೆಯಲ್ಲಿ ಅಂಕಣವಾಗಿ ಹರಿದ ಉರಿವಾದ ಇವುಗಳ ಮುಂದುವರಿಕೆಯನ್ನು ಬಿಂಬಿಸಿದೆ’ ಎನ್ನುತ್ತಾರೆ ಉಮಾಪತಿ. ಜೊತೆಗೆ ಮನುವಾದದ ಮಲದ ಗುಂಡಿಯಲ್ಲಿ ಶತಮಾನಗಳಿಂದ ಮುಳುಗೇಳುತ್ತಲೂ, ಅದನ್ನು ಸುಖಿಸುತ್ತಲೂ ಆತ್ಮವಂಚನೆಯಲ್ಲಿ ತೊಡಗಿವೆ ಸನಾತನವಾದಿ ಭಾರತೀಯ ಮನಸುಗಳು, ತಮ್ಮ ದೈಹಿಕ ಮಲ ಬಾಚಲು ಮನುಷ್ಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿವೆ.
ಆದರೆ ಮನದಲ್ಲಿ ತುಂಬಿ ತುಳುಕಾಡಿರುವ ಮೇಲು-ಕೀಳಿನ ಮಲವನ್ನೇ ಶ್ರೇಷ್ಠ ಸಂಸ್ಕೃತಿಯೆಂದು ಭ್ರಮಿಸಿ ಜೀವವಿರೋಧದ ಅಮಲಿನಲ್ಲಿ ತೇಲಾಡಿವೆ. ಈ ನಂಜು ಸೋಂಕಿತ ಮನಸುಗಳನ್ನು ಬೆತ್ತಲಾಗಿಸಿ ಕಟಕಟೆಯಲ್ಲಿ ನಿಲ್ಲಿಸಿ ಪಾಟೀಸವಾಲಿಗೆ ಗುರಿ ಮಾಡಿ ಅರಿವಿನ ಬೆಳಕು ತುಂಬಲು ಶ್ರಮಿಸಿದ ಬುದ್ಧ-ಬಸವ-ಪುಲೆ-ಪೆರಿಯಾರ್-ಅಂಬೇಡ್ಕರ್-ಪರಂಪರೆ ನಮ್ಮ ಕಣ್ಣ ಮುಂದಿದೆ. ಡಾ. ಉಮಾಶಂಕರ್ ಅವರ ಉರಿಪಾದದ ಬರೆಹಗಳು ಇಂತಹ ಅರಿವಿನ ಪರಂಪರೆಯ ದೀಪಕ್ಕೆ ಎಣ್ಣೆ ಎರೆದಿವೆ ಎಂದು ಡಿ. ಉಮಾಪತಿ ಅವರು ಮೆಚ್ಚುಗೆ ಸೂಚಿಸಿದ್ದಾರೆ
ಲೇಖಕ ಹೆಚ್.ಡಿ. ಉಮಾಶಂಕರ ಅವರು ಅಧ್ಯಾಪಕ ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲೇಖನ, ಕಥೆ ಬರೆಯುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ನಾಡಿನ ಹಲವು ಪತ್ರಿಕೆಗಳಲ್ಲಿ ಮತ್ತು ಇತರೆ ಲೇಖಕರ ಸಂಪಾದಿತ ಕೃತಿಗಳಲ್ಲಿ 100ಕ್ಕೂ ಹೆಚ್ಚಿನ ಲೇಖನ ಹಾಗೂ ಕತೆಗಳನ್ನು ರಚಿಸಿದ್ದಾರೆ. ನಾಡಿನ ಹಲವು ವೇದಿಕೆಗಳಲ್ಲಿ ವಿಷಯ ಮಂಡನೆ. ‘ಎಚ್ಚರದ ಉರಿ’ ಎನ್ನುವ ಸಂಶೋಧನಾ ಕೃತಿ ಮತ್ತು ‘ತೆರೆದ ಕಿಟಕಿ’ ಎನ್ನುವ ಸಂಪಾದಿತ ಕೃತಿ ಪ್ರಕಟಗೊಂಡಿವೆ. ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ ‘ಉರಿಪಾದ’ ಅಂಕಣಬರಹಗಳು ಅದೇ ಹೆಸರಿನಲ್ಲಿ ಕೃತಿರೂಪದಲ್ಲಿ ಪ್ರಕಟವಾಗಿದೆ. ಇವರ ಸಾಹಿತ್ಯಿಕ ಸೇವೆಗಾಗಿ ...
READ MORE