ಲೇಖಕ ಹೆಚ್.ಡಿ. ಉಮಾಶಂಕರ ಅವರು ಅಧ್ಯಾಪಕ ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲೇಖನ, ಕಥೆ ಬರೆಯುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ನಾಡಿನ ಹಲವು ಪತ್ರಿಕೆಗಳಲ್ಲಿ ಮತ್ತು ಇತರೆ ಲೇಖಕರ ಸಂಪಾದಿತ ಕೃತಿಗಳಲ್ಲಿ 100ಕ್ಕೂ ಹೆಚ್ಚಿನ ಲೇಖನ ಹಾಗೂ ಕತೆಗಳನ್ನು ರಚಿಸಿದ್ದಾರೆ. ನಾಡಿನ ಹಲವು ವೇದಿಕೆಗಳಲ್ಲಿ ವಿಷಯ ಮಂಡನೆ. ‘ಎಚ್ಚರದ ಉರಿ’ ಎನ್ನುವ ಸಂಶೋಧನಾ ಕೃತಿ ಮತ್ತು ‘ತೆರೆದ ಕಿಟಕಿ’ ಎನ್ನುವ ಸಂಪಾದಿತ ಕೃತಿ ಪ್ರಕಟಗೊಂಡಿವೆ. ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ ‘ಉರಿಪಾದ’ ಅಂಕಣಬರಹಗಳು ಅದೇ ಹೆಸರಿನಲ್ಲಿ ಕೃತಿರೂಪದಲ್ಲಿ ಪ್ರಕಟವಾಗಿದೆ. ಇವರ ಸಾಹಿತ್ಯಿಕ ಸೇವೆಗಾಗಿ 2016 ರಲ್ಲಿ ಮಂಡ್ಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.