ತನಿಜೇನಸುಧೆ

Author : ವಿರೂಪಾಕ್ಷಪ್ಪ ಕೋರಗಲ್‌

Pages 208

₹ 150.00




Year of Publication: 2017
Published by: ನವಚೇತನ ಪಬ್ಲಿಕೇಷನ್
Address: ನಂ 16, 25ನೇ ಮುಖ್ಯರಸ್ತೆ, ಬನಶಂಕರಿ ಮೊದಲನೇ ಹಂತ, 2ನೇ ಘಟ್ಟ, ಬೆಂಗಳೂರು - 560050

Synopsys

ತನಿಜೇನಸುಧೆ ವಿರೂಪಾಕ್ಷಪ್ಪ ಕೋರಗಲ್‌ ಅವರ ಕೃತಿಯಾಗಿದೆ. ತಮ್ಮ ಬದುಕಿನ ಅನುಭವಗಳನ್ನು ನಮ್ಮ ಬದುಕಿನ ಸಂದಿಗ್ಧಗಳ ಜೊತೆ ಸಂತುಲಿತಗೊಳಿಸುವ ಕಲೆಗಾರಿಕೆಯೇ ಅವರ್ಣನೀಯ, ಅಂಕಣ ಬರಹಗಳ ಇನ್ನೊಂದು ವಿಶೇಷತೆ, ಅವರ ಭಾಷೆ, ಏನೂ ವಿಶೇಷ ಎನ್ನುವಂಥ ಘಟನೆಯನ್ನೋ, ಹೇಳಿಕೆಯನ್ನೋ, ಕತೆಯನ್ನೋ ಹೇಳುತ್ತಾ ಅಕ್ಷರಪಯಣ ಶುರುಮಾಡುವ ಅವರು ಅದನ್ನು ಮುಗಿಸುವಾಗ ಇನ್ನೇನೋ ಆದ ಮಹತ್ವದ ಬದಲಾವಣೆ ಅವರ ಬರಹದೊಳಗೂ, ಓದುಗರಾದ ನಮ್ಮೊಳಗೂ ಆಗಿರುತ್ತದೆ. ಅದು ಬರೆಯುತ್ತಾ ಅವರಿಗೂ, ಓದುತ್ತಾ ನಮಗೂ ಏಕಕಾಲಕ್ಕೆ ಜ್ಞಾನೋದಯದ ದರ್ಶನವಾಗುತ್ತದೆ. ಜೀವನ ಪ್ರೀತಿ ಅವರ ಬರಹದುದ್ದಕ್ಕೂ ಕಾಣಬಹುದಾಗಿದೆ.

About the Author

ವಿರೂಪಾಕ್ಷಪ್ಪ ಕೋರಗಲ್‌

ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಅವರು ಕೊಪ್ಪಳ ಜಿಲ್ಲೆಯ ವದಗನಹಾಳ ಗ್ರಾಮದವರು. ಅಪ್ಪಟ ಮೊಘಲಾಯಿಯ ಗ್ರಾಮೀಣ ಪ್ರತಿಭೆ. ಎರಡನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದರು. ಗವಿಮಠದಲ್ಲಿ ಶಿಕ್ಷಣ ಪೂರೈಸಿ 30 ವರ್ಷಗಳಿಂದ ಜೈನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಓದುವಿಕೆ ಅವರ ಹವ್ಯಾಸ. ಸಣ್ಣ ಕತೆ ಅವರ ಆರಂಭದ ಸಾಹಿತ್ಯ ಪ್ರಕಾರ. ಕತೆ, ಪುರಾಣ ಕಾವ್ಯ ರಚನೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತದ ಪ್ರಾಧ್ಯಾಪಕರಾಗಿ, ಗಣಿತದ ಸಂಶೋಧನೆಯನ್ನು ಕನ್ನಡದಲ್ಲಿ ಮಾಡಿದ್ದಾರೆ. ಕೃತಿಗಳು: ಮುತ್ತಿನ ಚಿಪ್ಪಿನ ಸೂತ್ರಗಳು, ಭೂ ಅಳತೆಯಕ್ಷೇತ್ರ ಗಣಿತ, ಕಾವೇರಿಯಿಂದ ಗೋದಾವರಿವರೆಗೆ, ರಾಜಾದಿತ್ಯ, ನಾಯಿ  ...

READ MORE

Related Books