ಸೋಮಲಿಂಗ ಬೇಡರ ಅವರ 9 ನೇ ಕೃತಿ ಸಿಹಿ ಸೀತನಿ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾದ ಒಟ್ಟು 24 ಲೇಖನಗಳು ಇದರಲ್ಲಿವೆ. ಬಾಲ್ಯವನ್ನು ನೆನಪಿಸುವ, ಹಬ್ಬ ಹರಿದಿನಗಳು, ಜಾತ್ರೆ ಉತ್ಸವಗಳು, ಐತಿಹಾಸಿಕ ಸ್ಥಳಗಳು, ಮುಳುಗಡೆ, ಸಾಹಿತ್ಯ, ಮಳೆ, ಚಳಿ,ಬೇಸಿಗೆ ಇವುಗಳ ಹಿತಾನುಭವ ಮುಂತಾದ ವಿಷಯ ವಸ್ತುಳೊಂದಿಗೆ ಉತ್ತರ ಕರ್ನಾಟಕದ ಬಿಳಿ ಜೋಳದ ಸಿತನಿಯ ಸವಿ ಸವಿಯಾದ ನೆನಪು ಮಧುರವಾಗಿ ಹಿಡಿದಿಡಲಾಗಿದೆ. ಇದೊಂದು ಉತ್ತಮ ಆಕರ ಗ್ರಂಥವಾಗುವಲ್ಲಿ ನಿಸ್ಸಂಶಯ!
ಸೋಮಲಿಂಗ ಬೇಡರ ಅವರು ಇಂಡಿ ಜಿಲ್ಲೆ ಆಳೂರ ತಾಲ್ಲೂಕಿನ ವಿಜಯಪುರದವರು. ಎಂ. ಎ. ಬಿಎಡ್ ವಿದ್ಯಾರ್ಹತೆಯನ್ನು ಹೊಂದಿರುವ ಇವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರು. ಪ್ರಕಟಿತ ಕೃತಿಗಳು : ಮುತ್ತಿನ ಮಳೆ ( ಕವನ ಸಂಕಲನ 2001),ಮುದ್ದಿನ ಹಕ್ಕಿ(ಮಕ್ಕಳ ಕವನಗಳು 2006), ಹಕ್ಕಿ ಗೂಡು ( ಮಕ್ಕಳ ಕವನಗಳು 2015) ಸುಡುತ್ತಿದ್ದಾನೆ ಸೂರ್ಯ (ಕವನ ಸಂಕಲನ 2017) , ಬಂಗಾರ ಬಣ್ಣದ ಹಕ್ಕಿ (ಮಕ್ಕಳ ಕಥನ ಕವನಗಳು) 2018) ಮಕ್ಕಳಿಗಾಗಿ ನೂರಾರು ಕವಿತೆಗಳು 2019 ( ಕಸಾಪ ಸಮೀರವಾಡಿ ದತ್ತಿ, ಮಕ್ಕಳ ...
READ MORE