ಪ್ರಕಾಶಕ-ಲೇಖಕ ಗೌರಿ ಸುಂದರ್ ಅವರು ಸಂಪಾದಿಸಿದ ಕೃತಿ-ಶೃಂಗಾರ ಮಿಲನ. ವಾತ್ಸಾಯನನ ಕಾಮಸೂತ್ರ ಹಾಗೂ ಲೈಂಗಿಕ ಶಿಲ್ಪಗಳನ್ನು ಒಳಗೊಂಡ ಇತರೆ ದೇವಾಲಯಗಳ ಮಾಹಿತಿ ಒಳಗೊಂಡ ಕೃತಿ ಇದು. ಪ್ರಾಚೀನ ಭಾರತದಲ್ಲಿ ಕಲೆಯು ದೈವದ ಸ್ಥಾನ ಪಡೆದಿತ್ತು. ಮನುಷ್ಯನ ಮನಸ್ಸನ್ನು ಲೈಂಗಿಕತೆಯು ವಿಕಾರಗೊಳಿಸುತ್ತದೆ. ಆದ್ದರಿಂದ, ದೇವರ ಸಮೀಪಕ್ಕೆ ಬರುವವರು ಇಂತಹ ಭಾವನೆಯಿಂದ ಮುಕ್ತರಾಗಬೇಕು ಎಂಬ ಎಚ್ಚರಿಕೆಯಾಗಿ ಅವರು ದೇವಾಲಯಗಳ ಗೋಡೆಯ ಮೇಲೆ ಲೈಂಗಿಕ ಶಿಲ್ಪಗಳನ್ನು ಕೆತ್ತುತ್ತಿದ್ದರು. ಈ ಎಲ್ಲ ಆಕರ್ಷಣೆ ಮೀರಿ ಆ ವ್ಯಕ್ತಿಯು ದೇವರ ಕಡೆಗೆ ಸಾಗಬೇಕು. ಇದು ದೇವಾಲಯಗಳ ಗೋಡೆ ಮೇಲೆ ಲೈಂಗಿಕ ಶಿಲ್ಪಗಳು ಕೆತ್ತಿದ್ದರ ಉದ್ದೇಶವಾಗಿತ್ತು. ಅಷ್ಟಕ್ಕೂ, ಈ ಶಿಲ್ಪಗಳು ಕಲೆಯೇ ಆಗಿವೆ. ಅಂದರೆ, ಕಲೆಯು ದೇವರ ಮಟ್ಟಕ್ಕೆ ಪೂಜಿಸಲ್ಪಡುತ್ತಿತ್ತು. ಇಂತಹ ಸಂಗತಿಗಳನ್ನು ಒಳಗೊಂಡ ಲೇಖನಗಳ ಸಂಗ್ರಹ ಕೃತಿ ಇದು.
ಸಿನಿಮಾ ನಿರ್ಮಾಪಕ- ನಿರ್ದೇಶಕ, ಪುಸ್ತಕ ಪ್ರಕಾಶಕ, ಕನ್ನಡ ಚಳವಳಿ, ರಂಗಭೂಮಿ, ಛಾಯಾಗ್ರಹಣ ಹೀಗೆ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು ಗೌರಿ ಸುಂದರ್. ಇವರು ಮೂಲತಃ ಮೈಸೂರಿನವರು. ಅರಮನೆಯಲ್ಲಿ ನಡೆಯುವ ಗೌರಿ ಪೂಜೆಗೆ ಇವರ ಮನೆತನದ್ದೇ ಪೌರೋಹಿತ್ಯವಿತ್ತು. ಆದ್ದರಿಂದ, ಇವರ ಮನೆತನಕ್ಕೆ ‘ಗೌರಿ’ ಎಂಬ ಹೆಸರು ಸೇರಿಕೊಂಡಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲ ಕಾಲ ಗೈಡ್ ಆಗಿ ಕೆಲಸ ನಿರ್ವಹಿಸಿದ್ದರು. ಹೊಸಅಲೆಯ ಸಂಸ್ಕಾರ ಚಲನಚಿತ್ರ ನೋಡಿದ ಮೇಲೆ ಅವರು ಸಿನಿಮಾದತ್ತ ಮುಖ ಮಾಡಿದರು. ನಂತರ, ಅವರು ಹೊಸ ಅಲೆಯ ‘ಸಂದರ್ಭ’ ಸಿನಿಮಾ ಮಾಡಿದರು. ರಂಗಭೂಮಿ ಹಾಗೂ ದೂರದರ್ಶನದಲ್ಲಿ ಆಸಕ್ತಿ ಮೂಡಿ ...
READ MORE