ಶಾಂತಿವನದ ನಡಿಗೆ ಗಿನ್ನಿಸ್‌ನೆಡೆಗೆ

Author : ಲಕ್ಷ್ಮೀ ಮಚ್ಚಿನ

Pages 52

₹ 50.00




Year of Publication: 2013
Published by: ಶಾಂತಿವನ ಟ್ರಸ್ಟ್
Address: ಧರ್ಮಸ್ಥಳ

Synopsys

ಶಾಂತಿವವನದ ನಡಿಗೆ ಗಿನ್ನಿಸ್‌ನೆಡೆಗೆ ಈ ಪುಸ್ತಕದಲ್ಲಿ, 2013ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಾಂತಿವನ ಟ್ರಸ್ಟ್ ಸಾಮೂಹಿಕ ಸೂರ್ಯ ನಮಸ್ಕಾರವನ್ನು ಮಾಡಿಸುವ ಮೂಲಕ ಗಿನ್ನಿಸ್ ದಾಖಲೆ ಬರೆಯಿತು. ದ. ಕ. ಹಾಗೂ ಉಡುಪಿ ಜಿಲ್ಲೆಯ 47 ಕೇಂದ್ರ ಗಳಲ್ಲಿ ಯೋಗಾಸನ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. 62,824 ಯೋಗ ಪ್ರದರ್ಶಕರು, 1,286 ಸಾಕ್ಷಿದಾರರು, ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ 105 ಮಂದಿ ಪ್ರಾತ್ಯಕ್ಷಿಕೆ ನೀಡುವವರು, 2100 ಮಂದಿ ಸ್ವಯಂ ಸೇವಕರು ಪಾಲ್ಗೊಂಡು ನಡೆಸಿದ ಸೂರ್ಯ ನಮಸ್ಕಾರ ಕಾರ್ಯಕ್ರಮ ಈಗ ವಿಶ್ವದ ಮಾನ್ಯತೆ ಪಡೆದಿದೆ.

ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿಸಿಕೊಡಬೇಕೆನ್ನುವುದು ಉದ್ದೇಶ ವಾಗಿತ್ತು. ಯೋಗದ ವಿಚಾರದಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದೆ. ಜನಜೀವನದ ಆಹಾರ, ವ್ಯಾಯಾಮ ಪದ್ಧತಿಯಲ್ಲಿ ವ್ಯತ್ಯಯಗಳು ಆಗಿದ್ದು ಅನಗತ್ಯ ಬೊಜ್ಜು ದೇಹವನ್ನಾವರಿಸಿರುತ್ತದೆ. ಸದೃಢ ಮಾನಸಿಕ ಸಮತೋಲನಕ್ಕೆ ಯೋಗ ಸಹಕಾರಿ. ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ದೊಡ್ಡ ಆಂದೋಲನಕ್ಕೆ ವಿಶಿಷ್ಟ ಶಕ್ತಿ ನೀಡಿದೆ. ಇದನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ಇತರರಿಗೆ ವರ್ಗಾಯಿಸುವ ಪ್ರಯತ್ನ ಈ ಪುಟ್ಟ ಪುಸ್ತಕ, ಇದನ್ನು ಉದಯವಾಣಿ ಹಿರಿಯ ವರದಿಗಾರ ಲಕ್ಷ್ಮಿ ಮಚ್ಚಿನ ನಿರೂಪಿಸಿದ್ದಾರೆ.

About the Author

ಲಕ್ಷ್ಮೀ ಮಚ್ಚಿನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ  ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...

READ MORE

Related Books