“ಸಮೂಹಪ್ರಜ್ಞೆ' ಕೆಲವರ ಸ್ವತ್ತು ಎಂದು ಬೀಗುತ್ತಿರುವ ಈ ಸನ್ನಿವೇಶದಲ್ಲಿ ಆರ್.ಜಿ.ಹಳ್ಳಿ ನಾಗರಾಜ್ ಅವರ ಲೇಖನಗಳ ಸಂಕಲನ ಅದೇ ಹೆಸರಿನಿಂದ ಪ್ರಕಟವಾಗುತ್ತಿದೆ. ಸಮೂಹಪ್ರಜ್ಞೆ ಎಂದರೆ ಕನ್ನಡಪ್ರಜ್ಞೆ ಎಂದೇ ನಾವೆಲ್ಲರೂ ಗುರುತಿಸಬೇಕಾಗಿದೆ. ಈ ಕೃತಿಯಲ್ಲಿ ಅಕ್ಷರ ಪ್ರಪಾತದ ಪರವಾಗಿ ನಿಂತವರ ಪಟ್ಟಿಯೇ ಇದೆ. ನನ್ನೀ ಮಾತನ್ನು ನಿಜರ್ಥಾದಲ್ಲೇ ಭಾವಿಸದೆ ನಮ್ಮ ಗ್ರಾಮೀಣ ಲೇಖಕರು ಜನಪರ ಬದುಕಿಗೆ ರೂಪಿಸಿಕೊಂಡ ಹತ್ತು ಹಲವು ಬಳಸುಗಳನ್ನು ನಾವಿಲ್ಲಿ ಗಮನಿಸಬಹುದು ಎನ್ನುತ್ತಾರೆ ಪ್ರೊಫೆಸರ್ ಸಿ.ಜಿ.ಕೆ.
ಶೂದ್ರಪ್ರಜ್ಞೆಯನ್ನು ಸಾಕಷ್ಟು ಉದ್ದೀಪನಗೊಳಿಸಿದ ಹಿರಿಯ ಕವಿ ಕುವೆಂಪು ಅವರಿಂದ ಹಿಡಿದು ನಮ್ಮ ಗ್ರಾಮ್ಯಪ್ರಜ್ಞೆಗೆ ವಿಸ್ತರಣೆ ಕೊಟ್ಟ ಕಟ್ಟಿಮನಿ, ಬೆಸಗರಹಳ್ಳಿ ರಾಮಣ್ಣನವರವರೆಗೂ ಗಮನಿಸಬಹುದು. ಈ ಲೇಖನಗಳ ಹಿರಿಮೆ - ಕನ್ನಡದಲ್ಲಿ ವಿಶಿಷ್ಟ ನ್ಯಾಯಾಂಗ ತೀರ್ಪುನೀಡಿದ ಜಯತೀರ್ಥರಾಜಪುರೋಹಿತರವರೆಗೆ ಹಬ್ಬಿದೆ , ಕನ್ನಡ ನಾಡಿನ ನರನಾಡಿಯಾಗಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತು ವಿಫಲವಾದುದ್ದರ ಬಗ್ಗೆ ಅಲ್ಲದೆ ಕಾರಂತರು ಹೇಳಿದ ಪರಿಸರ ರಕ್ಷಣೆ, ಬಸವಣ್ಣನ ಸಮಾಜವಾದ, ಚಂಪಾ ಅವರ ಸಂಕ್ರಮಣ, ಪೋಲಂಕಿಯವರ ವಿಚಾರ - ಈ ಎಲ್ಲವನ್ನು ಒಳಗೊಂಡಿರುವ - ಸಮೂಹಪ್ರಜ್ಞೆಯಲ್ಲಿ ಜನಪರ ದೃಷ್ಟಿ ಇದೆ. ಇಷ್ಟೇ ಅಲ್ಲದೆ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಡಿಸೆಂಬರ್ 6 ರಂದು ಸುಟ್ಟದಿನ ಅಂದೇ ನಿರ್ನಾಮಗೊಳಿಸಿದ ಬಾಬ್ರಿಮಸೀದಿ ಬಗ್ಗೆ ಮತ್ತು ಕೋಮುವಾದಿಗಳಿಗೆ ಬೀದಿನಾಟಕದ ಮೂಲಕ ಉತ್ತರ ನೀಡಿದ ಸಫ್ರ್‌ಹ , ಲಂಕೇಶ್ ಅವರ ಟೀಕೆಟಿಪ್ಪಣಿ, ಹೀಗೆ ಭಿನ್ನ ಬಗೆಯ ವಸ್ತು ಮತ್ತು ವ್ಯಕ್ತಿಗಳನ್ನು ಆಯ್ದುಕೊಂಡು ನಿರ್ವಚಿಸಿರುವುದು ಪ್ರಸ್ತುತ ಸಂದರ್ಭದಲ್ಲಿ ಸೂಕ್ತವಾದದ್ದು.
ಆರ್.ಜಿ.ಹಳ್ಳಿ ಇಲ್ಲಿ ಓದುಗರ ಅನುಕೂಲಕ್ಕೆ ತಕ್ಕಂತೆ ಲೇಖನಗಳನ್ನು ಸಾಹಿತ್ಯ ಸಂಸ್ಕೃತಿ ವಿಚಾರ ಎಂದು ಮೂರು ವಿಭಾಗಗಳಾಗಿಸಿದ್ದಾರೆ. ಈ ವಿಭಾಗ ಕ್ರಮವನ್ನು ಪೂರ್ವಜರು ಒಂದೇ ಮೇರು ಎಂದು ಭಾವಿಸಿದ್ದರು. ಇಂದು ಅಕ್ಷರ ಕಲಿತವರು ಪ್ರಪಾತಕ್ಕೆ ಇಳಿಯುವ ಬದಲು ಸಂಸ್ಕೃತಿ ಉತ್ತುಂಗಕ್ಕೆ ಏರುವುದು ಈ ಲೇಖನಗಳ ಆಶಯ. ಸಾಹಿತ್ಯ - ಸಂಸ್ಕೃತಿಯ ಬಗ್ಗೆ ಕಾಳಜಿ ಹೊಂದಿರುವ ಎಲ್ಲರೂ ಗಮನಿಸಬೇಕಾದ ಕೃತಿ ಇದು.
ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ಅವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯ ರೈತ ಕುಟುಂಬದಲ್ಲಿ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಎಂಬತ್ತರ ದಶಕ ಬಂಡಾಯದ ಕಾಲಘಟ್ಟದ್ದು, ಹೊಸ ಚಿಂತನೆಯ ಬೆಳೆಗೆ, ಸಾಮಾಜಿಕ ಬದಲಾವಣೆಗೆ ನೆಲವೂ ಹದವಾಗಿತ್ತು, ಆರ್ ಜಿ ಹಳ್ಳಿ ನಾಗರಾಜ ಇದರಲ್ಲಿ ಪ್ರಮುಖರಲ್ಲದಿದ್ದರೂ ಬೆಳೆಯುತ್ತಿದ್ದ ಸಸಿ. ವಿದ್ಯಾರ್ಥಿ ದೆಸೆಯ ಆ ದಿನಗಳಲ್ಲಿ ಪ್ರಗತಿಪರ ವಿಚಾರಗಳಿಗೆ ತೆರೆದುಕೊಂಡು ಭಾಷಾ ಚಳವಳಿ, ರೈತಚಳವಳಿಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ವಚನ ಸಾಹಿತ್ಯ, ಸಮಾಜವಾದಿ ಚಿಂತನೆ, ಪೆರಿಯಾರ್, ಕುವೆಂಪು, ಎಚೈನ್ ವೈಚಾರಿಕತೆಯಲ್ಲಿನ ಬೆಳೆಕೊಯ್ಲಿನಲ್ಲಿ ಪ್ರಶ್ನಿಸುವ ಮೂಲಕ ಕಂಡುಕೊಂಡದ್ದು ಸ್ವತಂತ್ರ ದಾರಿ, ಕಾನೂನು, ಪತ್ರಿಕೋದ್ಯಮ ...
READ MORE