'ಸಾಹಿತಿಗಳು ರಸನಿಮಿಷಗಳು' ಶೀರ್ಷಿಕೆಯೇ ಹೇಳುವಂತೆ ಪ್ರಸಿದ್ಧ ಸಾಹಿತಿಗಳ ಬದುಕಿನ ಕೆಲವು ರಸನಿಮಿಷಗಳನ್ನು ಆಯಾಯ ಸರಸ್ವತಿ ಪುತ್ರರಿಗೆ ಸಂಬಂಧಿಸಿದ ಆತ್ಮ ಚರಿತ್ರೆ, ಜೀವನ ಚರಿತ್ರೆ, ಅಭಿನಂದನಾ ಗ್ರಂಥಗಳಿಂದ ಹೆಕ್ಕಿ , ಆಸಕ್ತ ಓದುಗರಿಗಾಗಿ ಒಂದೆಡೆ ಸಂಗ್ರಹಿಸಿದ್ದಾರೆ ವೈ ಎನ್ ಗುಂಡೂರಾವ್. ಹಿಂದಿನ ತಲೆಮಾರಿನ ಜನ ದೈವವನ್ನು ನಂಬಿದವರು, ನುಡಿದಂತೆ ನಡೆದವರು, ನ್ಯಾಯ ನಿಷ್ಠೆಗಳೇ ಅವರ ಬದುಕನ್ನು ರೂಪಿಸಿದ ಗುಣಗಳಾಗಿದ್ದವು. ಪುಣ್ಯಕೋಟಿಯ ಸಂತತಿಯವರು. ಅಂತವರ ಸಂಪೂರ್ಣ ಚಿತ್ರವಿಲ್ಲಿ ಸಿಗದಿದಿದ್ದರೂ ಭಾಗಶಃ ವ್ಯಕ್ತಿತ್ವ ಲಭ್ಯವಾಗುತ್ತದೆ. ಈ ಪುಸ್ತಕದಲ್ಲಿ ಬಂಧು- ಬಾಂಧವರಲ್ಲದಿದ್ದರೂ ವಸುದೈವ ಕುಟುಂಬಕಂ ಎಂದು ಭಾವಿಸಿ ಮನುಷ್ಯತ್ವವನ್ನು ಮೆರೆದ ಮಹನೀಯರ ಚಿತ್ರಣಗಳಿವೆ.
ಹಾಸ್ಯಪ್ರಬಂಧ ಲೇಖಕ, ಮಾಹಿತಿ ಸಂಗ್ರಾಹಕ, ಸಂಪಾದಕರಾದ ಗುಂಡೂರಾವ್ ಅವರು 1945 ಜೂನ್ 6ರಂದು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ ಹುಟ್ಟಿದರು. ನಿವೃತ್ತಿಯ ನಂತರ ಪೂರ್ಣ ಪ್ರಮಾಣದ ಸಾಹಿತ್ಯಾಭ್ಯಾಸ, ಬರೆಹದಲ್ಲಿ ತೊಡಗಿಕೊಂಡಿದ್ದಾರೆ. ಸದಭಿರುಚಿಯ ಹಾಸ್ಯ ಪ್ರಸಾರಕ್ಕಾಗಿ ಸ್ಥಾಪಿಸಿರುವ ‘ಹಾಸ್ಯಬ್ರಹ್ಮ ಟ್ರಸ್ಟ್’ನ ಸ್ಥಾಪಕ ಸದಸ್ಯರು. ಸಂಜೆ ಕಾಲೇಜಿಗೆ ಸೇರಿದಾಗ ದೊರೆತ ಸಾಹಿತಿ ಮಿತ್ರರ ಓಡನಾಟದಿಂದ ಸಾಹಿತ್ಯದ ಓದು, ಬರೆಹವನ್ನು ಅತಿ ಗಂಭೀರವಾಗಿ ತೆಗೆದುಕೊಂಡು ಪತ್ರಿಕೆಗಳಿಗೆ ಬರೆದ ಲೇಖನಗಳು. ಮೊದಲ ಲೇಖನ ಕಸ್ತೂರಿ ಮಾಸಪತ್ರಿಕೆ, ಮೊದಲ ಕತೆ ಇಂಚರ ಮಾಸ ಪತ್ರಿಕೆ ಹಾಗೂ ಮೊದಲ ಹಾಸ್ಯಲೇಖನ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ...
READ MORE