ಸಹಜ ಕೃಷಿ ಒಂದು ಪರಿಚಯ

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 65

₹ 0.00




Year of Publication: 1990
Published by: ಜನಪದ ಸೇವಾ ಟ್ರಸ್ಟ್
Address: ಮೇಲುಕೋಟೆ ಮಂಡ್ಯ-571431.

Synopsys

ʼಸಹಜ ಕೃಷಿ ಒಂದು ಅದ್ಯಯನʼ ಲೇಖನ ಸಂಗ್ರಹದ ಪುಸ್ತಕವನ್ನು ಲೇಖಕ ಪೂರ್ಣಚಂದ್ರ ತೇಜಸ್ವಿ ಅವರು ರಚಿಸಿದ್ದಾರೆ. ಕ್ರಾಂತಿಕಾರ ಕೃಷಿಕ;ಪಕೋಕಾ, ಮತ್ತೆ ಪ್ರಕೃತಿಯ ತೆಕ್ಕೆಗೆ,ಅತ್ಯಂತ ಸರಳ ಸತ್ಯಗಳು, ಸಹಜ ಕೃಷಿ, ಸಹಜ ಕೃಷಿಯ ಹೆಜ್ಜೆಗಳು, ರೈತರಿಗೊಂದು ಆಹ್ವಾನ, ರೈತರ ಆಶಾಕಿರಣ ಮುಂತಾದ ಆದ್ಯಾಯಗಳನ್ನು ಈ ಕೃತಿಯು ಹೊಂದಿದೆ.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...

READ MORE

Related Books