ಋತ

Author : ದೀಪಾ ಫಡ್ಕೆ

Pages 130

₹ 100.00




Year of Publication: 2016
Published by: ನೃತ್ಯಗಿರಿ ಪ್ರಕಾಶನ
Address: ನೃತ್ಯಗಿರಿ ಪ್ರಕಾಶನ

Synopsys

ಆಧ್ಯಾತ್ಮದ ಕುರಿತಾಗಿ ಲೇಖಕಿಯಾಗಿರುವ ದೀಪಾ ಫಡ್ಕೆಯವರು ಪತ್ರಿಕೆಗಳಿಗೆ ಬರೆದಿರುವ ಲೇಖನಗಳ ಸಂಗ್ರಹ. ದಾಸ ಕೀರ್ತನೆ, ಭಜನೆ, ಭಕ್ತಿ ಇಂತಹ ವಿಷಯಗಳ ಕುರಿತು ಬರೆದಿರುವ ಲೇಖನಗಳನ್ನು ಪ್ರಸ್ತುತ ಪಡಿಸಿರುವ ರೀತಿ ಆಕರ್ಷಕವಾಗಿದೆ. ಮುಖಪುಟದಿಂದ ಹಿಡಿದು ಉಪಸಂಹಾರದವರೆಗೂ ಆಕರ್ಷಕವಾಗಿ ಮೂಡಿ ಬಂದಿರುವ ಪುಸ್ತಕ ಇದಾಗಿದೆ.

ಸಾಮಾನ್ಯ ಓದುಗನಿಗೂ ಕೂಡ ಆಧ್ಯಾತ್ಮದ ಕುರಿತು ಒಲವು ಮೂಡಿಸುವ ರೀತಿಯಲ್ಲಿ ಪುಸ್ತಕದಲ್ಲಿನ ಬರೆವಣಿಗೆ ಶೈಲಿ ಮೂಡಿಬಂದಿದೆ. ಪುರಾಣ ಪಾತ್ರಗಳು ಮತ್ತು ಅವುಗಳಿಂದ ನಿರೂಪಿತಗೊಂಡ ಸನ್ನಿವೇಷಗಳ ಕುರಿತು ಉತ್ತಮ ಮಾಹಿತಿ ನೀಡಿ, ಅಂತಹ ಸನ್ನಿವೇಷಗಳನ್ನು ಆಧ್ಯಾತ್ಮದ ನೆಲೆಯಲ್ಲಿ ವಿಶ್ಲೇಷಿಸಿದ ಮಾಹಿತಿಯನ್ನು ಈ ಪುಸ್ತಕದಲ್ಲಿ ನಮೂದಿಸಲಾಗಿದೆ. ಪುಸ್ತಕವನ್ನು ಓದುತ್ತಾ ಸಾಗುತ್ತಿದ್ದಂತೆ ಕುಂತಿ, ಕೌಸಲ್ಯೆ, ಮಂಡೋದರಿಯಂತಹ ಪೌರಾಣಿಕ ಮಹಿಳೆಯರ ಕುರಿತಾದಂತಹ ಲೇಖನಗಳು ಕೂಡ ಕಾಣ ಸಿಗುತ್ತವೆ.

ಪುಸ್ತಕವನ್ನು ಓದುತ್ತಾ ಹೋದಂತೆ ಬರಹಗಳ ಆಳದಲ್ಲಿ ವ್ಯಕ್ತವಾಗಿರುವಂತಹ ಅರಿವು ಎದ್ದು ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಅರಿವು ಏನೆಂದು ತಿಳಿದುಕೊಳ್ಳಬೇಕಾದರೆ, ಪುಸ್ತಕದಲ್ಲಿರುವ ಬರಹಗಳ ಕುರಿತು ವಿಚಾರ ಮಂಥನ ಮಾಡುವುದು ಬಹಳ ಆವಶ್ಯಕ.

ಸೂರ್ಯಪ್ರಕಾಶ ಪಂಡಿತ್‌ ಅವರು ’ದೀಪಾ ಫಡ್ಡೆಯವರ ಬರಹಗಳಲ್ಲಿ ಭಾವನೆಗಳ ಮೇಲಾಟವಿದ್ದರೂ, ಸಂಶೋಭೆಗಳ ತಿಕ್ಕಾ ನಿಲುಗಡೆಗೆ ಬಂದರೆ ಆಳದಲ್ಲಿರುವ ಅರಿವು ಎದ್ದು ತೋರದೆ ಇರದು. ಇದಕ್ಕಾಗಿ ವಿಚಾರಮಂಥನದ ಸಾವು ಅನಿವಾರ್ಯ. ಈ ದಾರಿಯಲ್ಲಿ ತೋರಿಕೊಂಡಿರುವ ಫಲಗಳೇ ಈ ಕೃತಿಯಲ್ಲಿರುವ ಬರಹಗಳು’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ದೀಪಾ ಫಡ್ಕೆ

ಬೆಂಗಳೂರಿನಲ್ಲಿ ನೆಲೆಸಿರುವ ಡಾ. ದೀಪಾ ಫಡ್ಕೆ ಅವರು ಮೂಲತಃ ದಕ್ಷಿಣಕನ್ನಡದ ಬೆಳ್ತಂಗಡಿಯವರು. ಉಜಿರೆಯಲ್ಲಿ ಪದವಿ ಪಡೆದು, ಕನ್ನಡ ಎಂ.ಎ. ಪದವಿಯನ್ನು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. 'ಪುರಂದರ ಕನಕರ ಕೀರ್ತನೆ ಗಳಲ್ಲಿ ಅಭಿವ್ಯಕ್ತಿ : ಮನೋವೈಜ್ಞಾನಿಕ ಅಧ್ಯಯನ' ಎನ್ನುವ ವಿಷಯದಲ್ಲಿ ಅಧ್ಯಯನ ನಡೆಸಿರುವ ದೀಪಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ದೊರೆತಿದೆ. ದೀಪಾ ಫಡ್ಡೆಯವರು, ಸಂಸ್ಕೃತಿ ಕುರಿತ ಬರಹಗಳ ಗುಚ್ಛವಾದ 'ಋತ', ’ಹರಪನಹಳ್ಳಿ ಭೀಮವ್ವ', 'ಡಾ. ಪ್ರದೀಪಕುಮಾರ್ ಹೆಬ್ರಿ-ಮಹಾಕಾವ್ಯಗಳ ಕವಿ' ಹಾಗೂ ’ಲೋಕಸಂವಾದಿ' (ಮೊಗಸಾಲೆಯವರ ಬದುಕು ಬರಹಗಳ ಕುರಿತು), ನಾಡಿಗೆ ನಮಸ್ಕಾರ ಮಾಲೆಗಾಗಿ ಈ ಕೃತಿಯಲ್ಲದೆ ...

READ MORE

Related Books