ರಾಷ್ಟ್ರೋತ್ಥಾನದ ಇಂದಿನ ಆದ್ಯತೆಗಳು ಮೌಲಿಕ ವೈಚಾರಿಕ ಬರಹಗಳ ಪುಸ್ತಕವನ್ನು ಲೇಖಕ ಕೆ.ಎಸ್. ನಾರಾಯಣಾಚಾರ್ಯ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಭಾರತವು ಇಂದು ಅನೇಕ ಗಂಡಾಂತರಗಳನ್ನೆದುರಿಸುತ್ತಿದೆ. ಒಂದೆಡೆ ಬಾಹ್ಯಶತ್ರುಗಳು, ಇನ್ನೊಂದೆಡೆ ಆಂತರಿಕ ಶತ್ರುಗಳು. ದಿಕ್ಕುಗೆಟ್ಟ ಹಿಂದುಳಿದ ಸಮುದಾಯಗಳು. ರಾಷ್ಟ್ರಭಕ್ತಿಹೀನ ರಾಜಕೀಯ ಪಕ್ಷಗಳು. ಅಧಿಕಾರಕ್ಕಾಗಿ ದೇಶದ ಹಿತಾಸಕ್ತಿಗೆ ಬೆಂಕಿ ಹಚ್ಚುವ ನಾಯಕರು, ಹಿಂಬಾಲಕರು, ಪುಂಡ ಸೇನೆಗಳು, ಉಗ್ರರ ಗುಪ್ತದಳಗಳು, ಹಿಂಸಾವಿಹಾರಿಗಳು, ದುಡ್ಡಿಗಾಗಿ ಓಟು ಮಾರಿಕೊಂಡು, ಮುಂಬರುವ ಆಪತ್ತುಗಳನ್ನು ಕಾಣದೇ, ತಾತ್ಕಾಲಿಕ ಲಾಭಕ್ಕಾಗಿ ದೇಶದ್ರೋಹಕ್ಕೆ ಬದ್ಧರಾದ ಸಮುದಾಯಗಳು, ಜಾತಿದ್ವೇಷ ಎಂಬ ಉರಿಮಾರಿ, ಮೀಸಲಾತಿಯ ಹೆಸರಿನಲ್ಲಿ ನಾಶವಾಗುತ್ತಿರುವ ಸ್ವದೇಶಿ ಪ್ರತಿಭೆಗಳು, ತಿರುಚಿದ ನಮ್ಮ ಇತಿಹಾಸ ಪಠ್ಯಗಳು, ಸ್ವವಿಸ್ಮೃತಿಯಲ್ಲಿ ನಮ್ಮ ಪ್ರಾಚೀನ ಸಾಧನೆಗಳನ್ನು, ವೀರರನ್ನು ಮರೆತು ಇತರರ ಅಂಧಾನುಕರಣೆಯಲ್ಲಿ ಮುಳುಗಿದ ನಮ್ಮ ಯುವಸಮುದಾಯಗಳ ಬಗೆಗೆ ಈ ಕೃತಿಯಲ್ಲಿ ವಿವರಿಸಲಾಗಿದೆ.
ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...
READ MORE