ಲೇಖಕಿ ಎಂ. ಆರ್. ಕಮಲ. ಅವರು ಸ್ವತಃ ಹಲವು ದಿನಗಳ ಸವಾಲೊಂದನ್ನು ತೆಗೆದುಕೊಂಡು ಬಿಳಿಯ ಖಾಲಿ ಸ್ಟ್ರೀನಿನ ಮೇಲೆ ರಚಿಸಿದ ಜೀವನಾನುಭವದ ಕಥನ ‘#ಕ್ವಾರಂಟೇನ್. ಚಿಂತನಾ ಬರಹಗಳನ್ನು, ಕಾಡಿದ-ಪ್ರಭಾವಿಸಿದ ಸಂಗತಿಗಳು, ಕವಿಗಳ ಕುರಿತು ಬರೆದ ನವಿರು ಪ್ರಬಂಧಗಳು ಇಲ್ಲಿವೆ. ಸಹಜ ಮನೋಭಾವನೆಗಳು ಇಲ್ಲಿ ಅಭಿವ್ಯಕ್ತವಾಗಿದ್ದು ದೈನಂದಿನ ಬದುಕಿನ ತಲ್ಲಣಗಳ ಚಿತ್ರಣ ಕಾಣಸಿಗುತ್ತವೆ ಮಾತ್ರವಲ್ಲ ಸಾಂತ್ವಾನದೊಂದಿಗೆ ಚಿಂತನೆಗೂ ಹಚ್ಚಬಲ್ಲ ಆತ್ಮೀಯ ಬರಹಗಳ ಸಂಕಲನ ಇದಾಗಿದೆ.
ಕವಿ-ಅನುವಾದಕಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಎಂ.ಆರ್. ಕಮಲಾ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. 1959ರ ಮಾರ್ಚ್ 27ರಂದು ಜನಿಸಿದರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು. ಫ್ರೆಂಚ್ ಭಾಷೆಯಲ್ಲಿ ಪದವೀಧರರು. ಶಕುಂತಲೋಪಾಖ್ಯಾನ (1988), ಜಾಣೆ ಮತ್ತು ಇತರ ಕವಿತೆಗಳು (1992), ಹೂವು ಚೆಲ್ಲಿದ ಹಾದಿ (2007), ಮಾರಿಬಿಡಿ (2017) ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ’ಕತ್ತಲ ಹೂವಿನ ಹಾಡು (1989) ...
READ MORE