ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದಂತೆ, ಮಾನವ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಶೇ. 50 ಕ್ಕೂ ಹೆಚ್ಚು ಸೂಚ್ಯಂಕವಿದೆ. ಮಕ್ಕಳಿಗಾಗಿ ರೂಪಿತವಾದ ಎಲ್ಲ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸದೇ ಇದ್ದರೆ ರಾಷ್ಟ್ರೀಯ ಅಭಿವೃದ್ಧಿ ಎನ್ನುವುದು ಮರೀಚಿಕೆ ಎಂಬ ಚಿಂತನೆಯು ಮನುಕುಲವನ್ನು ಎಚ್ಚರಿಸುತ್ತಲೇ ಇದೆ. ಈ ಚಿಂತನೆಯ ಎಳೆಯಲ್ಲೇ ಮಕ್ಕಳ ಕತೆಗಳತ್ತ ಕಂಡುಕೊಂಡ ಮರು ಪಯಣದ ಮಾರ್ಗ ’ಪುಟ್ಟ ಹೆಜ್ಜೆ ಸದ್ದು ಕೇಳಿ’ ಎಂಬ ಕೃತಿ.
ಮಕ್ಕಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ದಿನನಿತ್ಯದ ಸಂಸ್ಕೃತಿಯಾಗಬೇಕು ಎಂಬ ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ವೆಂಕಟಾಚಲಯ್ಯ ಅವರ ಆಶಯವೂ ಕೃತಿ ರಚನೆಗೆ ಪ್ರೇರಣೆಯಾಗಿದೆ. ಮಕ್ಕಳ ಸಂರಕ್ಷಣೆ ಹೇಗೆ? ಎಂಬ ಮೂಲ ಚಿಂತನೆಯೊಂದಿಗೆ ನಾಡಿನ ಸುಮಾರು 41 ಜನ ಹಿರಿಯರಿಂದ, ಸಂಸ್ಥೆಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇ ಕೃತಿಯ ಗಟ್ಟಿತನ.
ಮಕ್ಕಳ ಹಿತವೇ ಪ್ರಧಾನವಾಗಿರಲಿ, 18 ವರ್ಷದ ಎಲ್ಲ ಮಕ್ಕಳ ಪುಟ್ಟ ಹೆಜ್ಜೆಗಳ ಸದ್ದು ಕೇಳಿ, ಸೂಕ್ತ ಕಡೆ ಹೆಜ್ಜೆ ಇಡಲು ಹಾಗೂ ಸಂರಕ್ಷಣೆ ಮಾಡಲು ಮುಂದಾಗೋಣ ಎನ್ನುವ ಮೂಲಕ ಓದುಗರಿಗೆ ಈ ಕೃತಿಯ ಮನವಿಯೂ ಆಗಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಇನ್ಫೋಸಿಸ್ ಸಂಸ್ಥೆ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ, ವಿಜ್ಞಾನಿ ಯು.ಆರ್, ರಾವ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಸಂತೋಷ ಹೆಗ್ಡೆ, ಕಡಿದಾಳು ಶಾಮಣ್ಣ ಸೇರಿದಂತೆ ನಾಡಿನ ಚಿಂತಕರ, ಬರೆಹಗಾರರ ಅಭಿಪ್ರಾಯ ರೂಪದ ಲೇಖನಗಳು ಇಲ್ಲಿವೆ. ಈ ಎಲ್ಲ ಚಿಂತನೆಗಳು ಮಕ್ಕಳ ಸಂರಕ್ಷಣೆಯ ಕಾಳಜಿಗೆ ಪೂರಕವಾಗಿ ಸಹಕರಿಸಲಿವೆ ಮಾತ್ರವಲ್ಲ; ಯೋಜನೆಗಳಿಗೆ ನಿರ್ದಿಷ್ಠ ರೂಪ ಹಾಗೂ ಗುರಿ ನಿಶ್ಚಯಿಸಿ, ಕಾರ್ಯಗತಗೊಳಿಸುವ ಸಂಕಲ್ಪದ ಶಕ್ತಿಯೂ ಆಗಲಿವೆ ಎಂಬುದು ಕೃತಿಯ ಸಂಪಾದಕ ಸತೀಶ್ ಚಪ್ಪರಿಕೆ ಅವರ ಆಶಯ.
ಕರ್ನಾಟಕ ಸರ್ಕಾರದ ರಾಯಚೂರು ಜಿಲ್ಲಾಡಳಿತದ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಹಾಗೂ ಯೂನಿಸೆಫ್ ಹೈದ್ರಾಬಾದ್ ಸಂಸ್ಥೆಯ ಸಹಯೋಗದಲ್ಲಿ ಫೆರ್ಬಿಂಡನ್ ಸಂಸ್ಥೆಯು ಕೃತಿಯನ್ನು ಸಂಪಾದಿಸಿ ವಿನ್ಯಾಸಗೊಳಿಸಿದೆ. ಕೊಣಿಲ ರಾಘವೇಂದ್ರ ಭಟ್ ಕೃತಿಯನ್ನು ಸಂಯೋಜಿಸಿದ್ದಾರೆ.
ಪತ್ರಕರ್ತ, ಲೇಖಕ, ಕಾದಂಬರಿಕಾರ ಸತೀಶ್ ಚಪ್ಪರಿಕೆ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆಯವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೋಟೆಲ್ ಉದ್ಯಮದಿಂದ ಬೆಂಗಳೂರಿಗೆ ಬಂದು ನೆಲಸಿದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ‘ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸತೀಶ್ ಲಂಡನ್‌ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೇವಲ ಬರವಣಿಗೆಯ ಶಕ್ತಿಯಿಂದಲೇ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದ ಅವರು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ...
READ MORE