‘ಕಾಲ ನಮ್ಮಕೈಯಲ್ಲಿದೆ’ ಶೈಲಜಾ ಉಡಚಣ ಅವರ ಲೇಖನಗಳಾಗಿವೆ. ವ್ಯಕ್ತಿತ್ವ ವಿಕಾಸನಕ್ಕೆ ಸಹಾಯವಾಗಬಹುದಾದಂಥ ಮಾರ್ಗದರ್ಶನ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆಯುವ ಬಗ್ಗೆ ಧೈರ್ಯದ ಮಾತುಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.
ಆಶಾವಾದಿ ಕವಯತ್ರಿ ಎಂಬ ಪ್ರಶಂಸೆಗೆ ಪಾತ್ರರಾಗಿರುವ ರಾಯಚೂರಿನ ಉಡಚಣದವರಾದ ಶೈಲಜಾ ಉಡಚಣ ಅವರು ಜನಿಸಿದ್ದು 1935 ಜುಲೈ 26ರಂದು. ತಂದೆ ಗುರುಮಲ್ಲಪ್ಪ, ತಾಯಿ ಪಾರ್ವತಿ. ದೂರ ಶಿಕ್ಷಣ ಪಡೆದು ಗುಲ್ಬರ್ಗದ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ವೃತ್ತಿ ಆರಂಭಿಸಿದ ಇವರು ಮೈಸೂರು ಹಾಗೂ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ಒಂದುಗಳಿಗೆ, ಕಾದುನೋಡು, ಸ್ವಗತ, ಕಪ್ಪುನೆಲ ಸೊಕ್ಕಿದ ಸೂರ್ಯ, ಕಾಲ ದೂರವಿಲ್ಲ ಮತ್ತು ಕೇಳುಮಗಾ, ಕಾದು ನೋಡು ವಚನಕಾರರ ದೃಷ್ಟಿಯಲ್ಲಿ ಸ್ತ್ರೀ, ವಚನಗಳಲ್ಲಿ ಸತಿಪತಿಭಾವ, ನನ್ನ ಲೇಖನಗಳು ಮುಂತಾದವು. ಅನುಪಮಾ ಪ್ರಶಸ್ತಿ, ...
READ MOREಹೊಸತು-2002- ಫೆಬ್ರವರಿ
ಯುವ ಜನತೆಗೆ ಬಹಳಷ್ಟು ಕಿವಿ ಮಾತುಗಳನ್ನೂ ಸಂದೇಶ ಗಳನ್ನೂ ಹೊತ್ತು ತಂದಿರುವ ಈ ಲೇಖನ ಸಂಗ್ರಹದಲ್ಲಿ ಮನಸ್ಸಿದ್ದಲ್ಲಿ ಮಾರ್ಗವೆಂಬ ಬಲವಾದ ಪ್ರತಿಪಾದನೆಯಿದೆ. ವ್ಯಕ್ತಿತ್ವ ವಿಕಾಸಕ್ಕೆ ಸಹಾಯವಾಗಬಹುದಾದಂಥ ಮಾರ್ಗದರ್ಶನ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆಯುವ ಬಗ್ಗೆ ಧೈರ್ಯದ ಮಾತುಗಳು ಇಲ್ಲಿವೆ. ಇವು ಸಾರ್ವತ್ರಿಕ ಸತ್ಯಗಳಾಗಿದ್ದು ಎಲ್ಲ ವರ್ಗದ ಜನರಿಗೂ ಅನ್ವಯಿಸುವಂಥವು.