ಆಶಾವಾದಿ ಕವಯತ್ರಿ ಎಂಬ ಪ್ರಶಂಸೆಗೆ ಪಾತ್ರರಾಗಿರುವ ರಾಯಚೂರಿನ ಉಡಚಣದವರಾದ ಶೈಲಜಾ ಉಡಚಣ ಅವರು ಜನಿಸಿದ್ದು 1935 ಜುಲೈ 26ರಂದು. ತಂದೆ ಗುರುಮಲ್ಲಪ್ಪ, ತಾಯಿ ಪಾರ್ವತಿ. ದೂರ ಶಿಕ್ಷಣ ಪಡೆದು ಗುಲ್ಬರ್ಗದ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ವೃತ್ತಿ ಆರಂಭಿಸಿದ ಇವರು ಮೈಸೂರು ಹಾಗೂ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.
ಇವರು ಬರೆದ ಪ್ರಮುಖ ಕೃತಿಗಳೆಂದರೆ ಒಂದುಗಳಿಗೆ, ಕಾದುನೋಡು, ಸ್ವಗತ, ಕಪ್ಪುನೆಲ ಸೊಕ್ಕಿದ ಸೂರ್ಯ, ಕಾಲ ದೂರವಿಲ್ಲ ಮತ್ತು ಕೇಳುಮಗಾ, ಕಾದು ನೋಡು ವಚನಕಾರರ ದೃಷ್ಟಿಯಲ್ಲಿ ಸ್ತ್ರೀ, ವಚನಗಳಲ್ಲಿ ಸತಿಪತಿಭಾವ, ನನ್ನ ಲೇಖನಗಳು ಮುಂತಾದವು. ಅನುಪಮಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿಹಾಗೂ ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.