‘ವನದ ಓದು’ ಚರ್ಚೆಯ ಪುಟಗಳು ಇವು ಪುನೀತ್ ಕುಮಾರ್ ಎಲ್, ಮೋಹನ್ ಎಂ., ಮಿಲನ್ ಎಂ.ಹೆಚ್., ಅವರು ಸಂಪಾದಿಸಿರುವ ಕೃತಿ. ಸಾಹಿತ್ಯವನ ಅರಿವಿನ ಕೃಷಿ ಎನ್ನುವ ಅನೌಪಚಾರಿಕ ಚರ್ಚಾಕೂಟವನ್ನು ಸಂಘಟಿಸಿಕೊಂಡು ಪ್ರತಿವಾರವೂ ಸಮಾಜೋ ಸಾಂಸ್ಕೃತಿಕ ಪಠ್ಯವನ್ನು ಚರ್ಚಿಸುವುದು ಇಲ್ಲಿನ ಪ್ರಮುಖ ಆಶಯವಾಗಿದೆ. ಪಠ್ಯ ಒಂದರ ಮೂಲಕ ಪ್ರವೇಶಿಸಿ ಪಠ್ಯ ಸಮಾಜದ ನಡುವಿನ ಸಂಬಂಧ, ಪಠ್ಯದೊಳಗಿನ ರಾಜಕಾರಣ, ಪಠ್ಯ ಮತ್ತು ವರ್ತಮಾನ ಹೀಗೆ ಬಹುಶಿಸ್ತೀಯ ಚರ್ಚೆಗೆ ಪಠ್ಯವನ್ನು ಒಳಗು ಮಾಡಿ ಚರ್ಚಿಸುತ್ತಾ ಬಂದಿರುವ ಸಾಹಿತ್ಯವು ಇಂದು ಆ ಚರ್ಚೆಗಳ ಹದಿನಾಲ್ಕು ವಿಷಯಗಳ ಸಂಬಂಧಪಟ್ಟಹಾಗೆ, ವನದ ಓದುಗರ ಬಳಿ ಬರಹವನ್ನು ಬರೆಸಿ ತನ್ನ 50ನೇ ಸಂಚಿಕೆಯಲ್ಲಿ ಪ್ರಕಟಪಡಿಸುತ್ತಿದೆ. ಪ್ರತಿ ಭಾನುವಾರ ಮುಂಜಾನೆ ಬೆಂಗಳೂರು ವಿಶ್ವವಿದ್ಯಾಲಯದ ಪ್ರಶಾಂತ ಆವರಣದಲ್ಲಿ ಚರ್ಚೆಗೆ ಕೂಡುವ ಸಾಹಿತ್ಯವನದ ಗೆಳೆಯರು ಚರ್ಚೆಯನ್ನು ತಾರಕಕ್ಕೆ ಏಳದೊಯ್ದದ್ದು ಉಂಟು. ಇಷ್ಟ ದಿನ ನಡೆದ ಚರ್ಚೆಯಲ್ಲಿ ಹಲವು ವಿಚಾರಗಳು, ಸಿದ್ಧಾಂತಗಳೂ ಬಂದು ಹಾದು ಹೋದರೂ ಕೂಡಾ ಯಾವುದೇ ಒಂದಕ್ಕೆ ಅಂಟಿಕೊಳ್ಳದೆ, ಜೋತುಬೀಳದೆ, ಸತ್ಯಗಳನ್ನು ಒಪ್ಪಿಕೊಳ್ಳುತ್ತಾ ಮುನ್ನೆಡೆಯುತ್ತಿದೆ.
ಮಿಲನ್ ಎಂ.ಎಚ್ ಮೂಲತಃ ಮಂಡ್ಯ ಜಿಲ್ಲೆಯ ಮುತ್ತೇಗೆರೆ ಊರಿನವರು. ತಂದೆ ಹೊನ್ನಯ್ಯ, ತಾಯಿ- ಲಕ್ಷ್ಮಿ. ಎಂ.ಎ ಸ್ನಾತಕೋತ್ತರ ಕನ್ನಡ ಪದವಿಯನ್ನು ಪಡೆದು ಬಿ.ಎಡ್ ಕೋರ್ಸ್ ಪೂರೈಸಿದ್ದಾರೆ. ಖಾಸಗೀ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ವನ ಎಂಬ ಹೆಸರಿನ ಚರ್ಚೆಯ ಗುಂಪನ್ನು ಒಳಗೊಂಡು, ಪಠ್ಯವನ್ನು ಕುರಿತಾದ ಚರ್ಚೆ ನಡೆಸುವುದು ಇವರ ಹವ್ಯಾಸವಾಗಿದೆ. ...
READ MORE