ಲಕ್ಷ್ಮೀ ಮಚ್ಚಿನ ಅವರು ಬರೆದಿರುವ ‘ನೆತ್ತರ ಹಾದಿಯಲ್ಲಿ’ ಕೃತಿಯು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಆಸುಪಾಸುಗಳಲ್ಲಿ ನಡೆಯುತ್ತಾ ಬಂದ ನಕ್ಸಲ್ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಕೃತಿ ಎರಡು ರೀತಿಯಲ್ಲಿ ಮಹತ್ವವನ್ನು ಹೊಂದಿದೆ. ಮೊದಲನೆಯದು ವಿವರಗಳು, ನಕ್ಸಲ್ ಚಟುವಟಿಕೆಗೆ ಕಾರಣವಾದ ಸಂಗತಿಗಳು. ನಕ್ಸಲ್ ಚಟುವಟಿಕೆಗಳು, ಪೊಲೀಸರ ಕಾರ್ಯನಿರ್ವಹಣೆ, ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡೆಗಳು, ಭ್ರಷ್ಟಾಚಾರ - ಹೀಗೆ ನಕ್ಸಲಿಸಂನ ಸುತ್ತ ಬೆಸೆದುಕೊಂಡಿರುವ ವಿವರಗಳು ಈ ಕೃತಿಯಲ್ಲಿ ಸಿಗುತ್ತವೆ. ಎರಡನೆಯದು ಇದಕ್ಕಿಂತ ಮಹತ್ತ್ವದ್ದಾದ; ಒಬ್ಬ ಸಂವೇದನಾಶೀಲ ಲೇಖಕ ತನಗೆ ಲಭ್ಯವಾದ ವಿವರಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥೈಸುವ ವಿಧಾನ, ನೀಲಾ ಹೇಳುವ ಮಾತುಗಳನ್ನು ಕುರ್ಚಿಯಲ್ಲಿ ಹೊತ್ತೊಯ್ದರು. ಚಟ್ಟದಲ್ಲಿ ತಂದರು’ ಎಂಬ ಮಾತುಗಳಲ್ಲಿ ನಿರೂಪಿಸಿ ಸನ್ನಿವೇಶವು ಓದುಗರನ್ನು ತೀವ್ರವಾಗಿ ಕಾಡುವಂತೆ ಮಾಡುತ್ತಾರೆ. ಒಂದು ಸಣ್ಣ ಕಾಯಿಲೆ ಬಂದರೆ 15 ಕಿಮೀ. ನಡೆದು ಹೋಗಬೇಕಾದ ಪರಿಸ್ಥಿತಿಯನ್ನು ಲಕ್ಷ್ಮೀ ಮಚ್ಚಿನ ಅವರು ಅರ್ಥೈಸುವ ರೀತಿ ಇದು. ನಕ್ಸಲಿಸಂನ ಬಗ್ಗೆ ಬರೆಯುವುದು ಬಹಳ ಕಷ್ಟ, ಇದು ಎಡಪಂಥ ಮತ್ತು ಬಲಪಂಥದ ನಡುವಿನ ಬೆಂಕಿಯಲ್ಲಿರುವ ವಿಷಯ.ಅದನ್ನು ಮೀರಿ ನಿಂತು ಅಸಾಧಾರಣ ಸಂಯಮದಿಂದ ಈ ಕೆಲಸವನ್ನು ಲಕ್ಷ್ಮೀ ಮಚ್ಚಿನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...
READ MORE