ಲೇಖಕ ಕೃಷ್ಣಮೂರ್ತಿ ಚಮರಂ ಅವರ ಲೇಖನಗಳ ಸಂಗ್ರಹ. ʻಮೀಸಲಾತಿ ಮರ್ಮʼ. ಪುಸ್ತಕದ ಹಿನ್ನುಡಿಯಲ್ಲಿ, “ಮೀಸಲಾತಿ ಎಂದರೇನು ? ಮೀಸಲಾತಿಯ ಕಲ್ಪನೆಯನ್ನು ತಂದವರಾರು? ಮೀಸಲಾತಿ ಸೌಲಭ್ಯಗಳು ಕೇವಲ ಹಿಂದುಳಿದ ವರ್ಗಗಳು ಹಾಗೂ ದಲಿತರಿಗೆ ಮಾತ್ರವೇ ಲಭಿಸುತ್ತಿದೆಯೇ? ಮೀಸಲಾತಿಯು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಯನ್ನು ತಂದಿದೆಯೇ? ಬ್ರಾಹ್ಮಣರು ಮತ್ತು ಇತರ ಮೇಲ್ಜಾತಿ ಸಮುದಾಯಗಳು ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿವೆಯೇ? ಮೀಸಲಾತಿಯಿಂದಾಗಿ ಭಾರತೀಯ ಜನಸಮುದಾಯಗಳಲ್ಲಿ ಆಗಾಗ ಸಂಘರ್ಷಗಳು ನಡೆಯುತ್ತಿರುವುದೇಕೆ? ಮೀಸಲಾತಿ ಸೌಲಭ್ಯದಿಂದ ಅನರ್ಹರೂ ಅಧಿಕಾರಗಳಿಸುತ್ತಿದ್ದಾರೆ ಎಂಬ ಕೆಲವರ ವಾದದಲ್ಲಿ ಹುರುಳಿದೆಯೇ? ಅವರ ವಾದದ ಹಿಂದಿರುವ ಸತ್ಯ ಮಿಥ್ಯಗಳೇನು? ಮೀಸಲಾತಿಗಾಗಿ ನಡೆದ ಹೋರಾಟಗಳೇನೇನು? ಎಂಬಿತ್ಯಾದಿ ಮೀಸಲಾತಿ ಕುರಿತ ನೂರಾರು ಪ್ರಶ್ನೆಗಳಿಗೆ ಚಿಂತಕ ಡಾ. ಕೃಷ್ಣಮೂರ್ತಿ ಚಮರಂ ಅವರು ಸಂಪಾದಿಸಿರುವ “ಮೀಸಲಾತಿ ಮರ್ಮ” ಎಂಬ ಈ ಅಪರೂಪದ ಕೃತಿಯು ನಿಶ್ಚಿತವಾಗಿ ಸ್ಪಷ್ಟವಾದ ಉತ್ತರವನ್ನು ಕೊಡುತ್ತದೆ. ಈ ಕೃತಿ ಓದಿದ ಮೇಲೆ ಬಹುಶಃ ಮೀಸಲಾತಿ ಕುರಿತ ಯಾವುದೇ ಗೊಂದಲಗಳೂ ಉಳಿಯಲಾರವು” ಎಂದು ಹೇಳಲಾಗಿದೆ.
ಲೇಖಕ ಡಾ. ಕೃಷ್ಣಮೂರ್ತಿ ಚಮರಂ ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚನ್ನಮಲ್ಲಿಪುರದವರು. ತಂದೆ-ಮಲಿಯಯ್ಯ, ತಾಯಿ- ರಂಗಮ್ಮ. ಪ್ರಾಥಮಿಕ ಶಿಕ್ಷಣವನ್ನು ಗುಂಡ್ಲುಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣವನ್ನು ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರೈಸಿದರು. ಆನಂತರ ಪಿಯುಸಿ ವಿಜ್ಞಾನ ವಿಷಯವನ್ನು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪೂರೈಸಿದ ಅವರು ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು, ನಂತರ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್ಸಿ(ಸಸ್ಯಶಾಸ್ತ್ರ), ಎಂ.ಫಿಲ್(ಬೀಜ ತಂತ್ರಜ್ಞಾನ) ಮತ್ತು ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದರು. ವಿದ್ಯಾಭ್ಯಾಸದ ನಂತರ ಕೆಲಕಾಲ ‘ಕರ್ನಾಟಕ ರಿಮೋಟ್ ...
READ MORE