ಮನವೇ ಬೀಜ

Author : ಬಸವಪ್ರಭು ಪಾಟೀಲ

Pages 94

₹ 350.00




Year of Publication: 2017
Published by: ಶ್ರೀ ಮಾಲತೇಶ್ ಪ್ರಕಾಶನ
Address: #892/1, 1 ನೇ ಹಂತ, ಚಂದ್ರಾಲೇಔಟ್, ಬೆಂಗಳೂರು- 56 072

Synopsys

‘ಮನವೇ ಬೀಜ’  ಲೇಖಕ ಬಸವಪ್ರಭು ಪಾಟೀಲರ ಲೇಖನ ಸಂಕಲನ. ಡಾ. ಬಸವಪ್ರಭು ಪಾಟೀಲ ಬೆಟ್ಟದೂರು ಅವರು ಶರಣ ಸಾಹಿತ್ಯದ ನಿಷೆಯ ಅಭ್ಯಾಸಿಗಳಲ್ಲೊಬ್ಬರು. ಅವರ 'ಬೆಟ್ಟದೂರು' ಮನೆತನವೇ ಶರಣರ ಪರಂಪರೆಯನ್ನು ಮೈಗೂಡಿಸಿಕೊಂಡವರು, ತಮ್ಮ ತನು-ಮನಗಳನ್ನು ಶರಣ ಪರಂಪರೆಗೆ ಅರ್ಪಿಸಿಕೊಂಡವರು. ಅವರ ತಂದೆ ಚೆನ್ನಬಸವಪ್ಪ ಬಸವ ತತ್ವಗಳ ಆರಾಧಕರು. ಈಗ ಅವರ ಮಕ್ಕಳಾದ, ಪ್ರಸ್ತುತ ಗ್ರಂಥದ ಲೇಖಕರಾದ ಡಾ. ಬಸವಪ್ರಭು, ಇವರ ತಮ್ಮ ಪ್ರೊ. ಅಲ್ಲಮಪ್ರಭು ಆ ಪರಂಪರೆಯ ವಾರಸುದಾರರು. 

ಬಸವಣ್ಣನವರ ಮನಶೋಧನೆಯಿಂದ ಪ್ರಾರಂಭವಾದ ಇಲ್ಲಿಯ ವಿಶ್ಲೇಷಣಾತ್ಮಕ ಬರಹಗಳಲ್ಲಿ 11-12ನೆಯ ಶತಮಾನದ ವಚನಕಾರರಿಂದ 17-18ನೆಯ ಶತಮಾನದ ವಚನಕಾರರವರೆಗೆ ಒಟ್ಟು 55 ವಚನಕಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎಲ್ಲ ಶೀರ್ಷಿಕೆಗಳಲ್ಲಿ 'ಮನ' ಇದ್ದೇ ಇದೆ. 'ಮನಸ್ಸು' ಅಮೂರ್ತ ವಸ್ತುವಾದರೂ ಅದಿಲ್ಲದೆ ಮಾನವ ಜಗತ್ತೆಂಬುದಿಲ್ಲ. ಅದರ ಚಲನವಲನಗಳೆಲ್ಲ ಆಸೆ'ಯನ್ನು ಬೆನ್ನಟ್ಟಿಕೊಂಡಿರುತ್ತವೆ. ಇದನ್ನು ಡಾ. ಬಸವಪ್ರಭು ಚೆನ್ನಾಗಿ ತಿಳಿದಿದ್ದಾರೆ.

'ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೇ ಬೀಜ'. ಇದು ಗ್ರಂಥದ ಮುಖ್ಯ ಸೂತ್ರ. ಎಲ್ಲ ಚೇಷ್ಟೆಗಳಿಗೆ ಬೀಜವಾಗಿರುವ 'ಮನ'ವನ್ನು ಕುರಿತು ವಚನಕಾರರು ಹೇಳಿದುದನ್ನು ಹಾಗೂ ಆ ಮನ ಘನಮನವಾಗುವುದರ ದಾರಿಯನ್ನು ತೋರಿದ ಶರಣರ ನಿಲುವುಗಳನ್ನು ಡಾ. ಬಸವಪ್ರಭು ಅವರು ಪರಿಶೀಲಿಸಿ, ಅಲ್ಲಿಗಲ್ಲಿಗೆ ತಮ್ಮ ತೀರ್ಮಾನಗಳನ್ನು ತಿಳಿಸಿದ್ದಾರೆ. ಇದು ವಚನ ಸಾಹಿತ್ಯದ ವಿಶಿಷ್ಟವಾದ ಚಿಂತನೆ, ವೃತ್ತಿಯಿಂದ ವೈದ್ಯರಾದ ಡಾ. ಬಸವಪ್ರಭು ಅವರು ಮನಸ್ಸಿನ ಕಾಯಿಲೆಗಳನ್ನು ಚೆನ್ನಾಗಿಯೇ ಗುರುತಿಸಿ, ಅದಕ್ಕೆ ಪರಿಹಾರೋಪಾಯಗಳನ್ನು ಸೂಚಿಸಿದ್ದು ಈ ಗ್ರಂಥದಲ್ಲಿಯ ಹೆಚ್ಚುಗಾರಿಕೆ.

 

About the Author

ಬಸವಪ್ರಭು ಪಾಟೀಲ

ಡಾ. ಬಸವಪ್ರಭು ಪಾಟೀಲರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಸಾಹಿತಿಗಳು, ಶರಣ ಜೀವನವನ್ನು ಅಳವಡಿಸಿಕೊಂಡವರು. ಬೆಟ್ಟದೂರದಂತಹ ಊರಲ್ಲಿ ಹುಟ್ಟಿ ಮನೆಯ ಕಲೆ-ಸಾಹಿತ್ಯ-ಸಂಸ್ಕೃತಿ ಸಂಗಮದ ಪರಿಸರದಲ್ಲಿ ಬೆಳೆದವರು. ಎಂ.ಬಿ. ಬಿ.ಎಸ್, ಎಫ್, ಸಿ. ಜಿ. ಪಿ., ಡಿ.ಎಫ್. ಎಚ್. ಪದವಿಯನ್ನು ವೈದ್ಯಕೀಯದಲ್ಲಿ ಪಡೆದರು. ರಾಯಚೂರು ಜಿಲ್ಲೆಯ ಮಾನವಿಯಲ್ಲಿ ಕಲ್ಯಾಣ ವೈದ್ಯಾಲಯ ಸ್ಥಾಪಿಸಿ ವೈದ್ಯರಾಗಿ ಜನಪರ ಸೇವೆ ಸಲ್ಲಿಸಿದ್ದಾರೆ. ಇವರು ಕವಿಯಾಗಿ, ವೈಚಾರಿಕ ಸಾಹಿತಿಯಾಗಿದ್ದರಿಂದ ಮಾತನಾಡಿ ಹೆಣಗಳೇ, ಕವನ ಸಂಕಲನ, ಇದೇನು ಕತೆ, ವಿಚಾರ ಲೇಖನಗಳ ಸಂಗ್ರಹ ಹಾಗೂ ನವ ಸಾಕ್ಷರಿಗಾಗಿ ಪ್ರಥಮ ಚಿಕಿತ್ಸೆ ಕೃತಿ ಪ್ರಕಟಿಸಿದ್ದಾರೆ. ಪ್ರಪಂಚ, ವಿಶ್ವಕಲ್ಯಾಣ, ಸಂಕ್ರಮಣ, ...

READ MORE

Related Books