‘ಮಲೆನಾಡ ಹಾಡು ಪಾಡು’ ಕೃತಿಯು ಶರತ್ ಕಲ್ಕೋಡ್ ಅವರ ಮಲೆನಾಡಿನ ಜನರ ಜೀವನ ಚಿತ್ರಣಗಳನ್ನು ಕುರಿತ ಲೇಖನ ಸಂಕಲನವಾಗಿದೆ. ಮಲೆನಾಡಿನ ಪ್ರಕೃತಿಯನ್ನು ಲೇಖಕ ಇಲ್ಲಿ ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರಕೃತಿಯ ಗೆಳೆತನ, ಜನರ ಜೀವನ, ಕಾಡಿನ ಪರಿಚಯ, ಸಂಸ್ಕೃತಿ ಹಾಗೂ ಆಚಾರ ವಿಚಾರವನ್ನು ತಮ್ಮ ಬರವಣಿಗೆಯಲ್ಲಿ ಬಣ್ಣಿಸಿದ್ದು, ಪರಿಸರ ಪ್ರಿಯರಿಗೆ ಹೊಸತನವನ್ನು ಈ ಕೃತಿ ನೀಡುತ್ತದೆ. ಮನುಷ್ಯನ ಒಡಲಲ್ಲಿ ಮತ್ತೆ ಮತ್ತೆ ಪ್ರಕೃತಿಯೊಡನೆ ಪುನರಾರಂಭಗೊಳ್ಳುವ ಸ್ನೇಹ ಕಣ್ತುಂಬಿಸುವಂತಿದೆ.
ಶರತ್ ಕಲ್ಕೋಡ್ (1946) ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮಗಳೆರಡರಲ್ಲೂ ಗಣನೀಯ ಸೇವೆ ಸಲ್ಲಿಸುತ್ತಿರುವವರು, ಮೂಲತಃ ಮಲೆನಾಡಿನವರು. ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ಕನ್ನಡ ಎಂ.ಎ. ಪದವಿ ಪಡೆದವರು. 1981ರಲ್ಲಿ ಮಂಗಳೂರಿನ 'ಸಂತೋಷ' ಮಾಸಪತ್ರಿಕೆಯ ಸಂಪಾದಕ ಮಂಡಳಿಗೆ ಸೇರಿ, ಪತ್ರಿಕಾ ಜೀವನವನ್ನು ಆರಂಭಿಸಿದ ಶರತ್ ಕಲ್ಕೋಡ್, ಮುಂದೆ ಮಣಿಪಾಲದ 'ತರಂಗ' ಪತ್ರಿಕೆಯಲ್ಲಿ 9 ವರ್ಷ, ಬೆಂಗಳೂರಿನ 'ಸುಧಾ' - 'ಮಯೂರ' ಪತ್ರಿಕೆಗಳ ಸಹಾಯಕ ಸಂಪಾದಕರಾಗಿ ಸುಮಾರು ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ನಂತರವೂ, “ಉಷಾಕಿರಣ', 'ಓ ಮನಸೇ' ಪತ್ರಿಕೆಗಳಲ್ಲಿ ಕೆಲವು ವರ್ಷ ಕಾರ್ಯನಿರ್ವಹಿಸಿ, ಈಗ ಬರವಣಿಗೆ ಹಾಗೂ ಕೃಷಿಯನ್ನೇ ...
READ MORE