”ಮೈನಾ ಲೋಕ’ -ಲೇಖಕ ಮಹಿಪಾಲರೆಡ್ಡಿ ಮುನ್ನೂರು ಅವರ ಬದುಕಿನ ಜಂಜಾಟದ ಅಹವಾಲುಗಳ ನಡುವೆ ಸಿಕ್ಕಿ ಹೋದ ಭಾವ ಜಗತ್ತಿನ ಚಿತ್ರಣವೇ ಈ ಕೃತಿ. ಕಲಬುರ್ಗಿಯ ’ಕ್ರಾಂತಿ” ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣಗಳ ಸಂಗ್ರಹವಾಗಿದೆ. ಸಾಹಿತಿ ಗೋ.ರು.ಚೆನ್ನಬಸಪ್ಪ ಕೃತಿಯ ಮುನ್ನುಡಿಯಲ್ಲಿ ’ಬದುಕಿನ ತಲ್ಲಣಗಳನ್ನು ಸೂಕ್ಷ್ಮವಾಗಿ ಹಾಗೂ ಅಷ್ಟೇ ಸಮರ್ಥವಾಗಿ ಅಕ್ಷರಗಳಲ್ಲಿ ಹಿಡಿದಿಡುವ ಕಲೆ ಲೇಖಕರಿಗೆ ಸಿದ್ಧಿಸಿದೆ. ಇಲ್ಲಿಯ ಪ್ರತಿ ಅನುಭವವು ಸಾಮೂಹಿಕತೆಯನ್ನು ಪಡೆದುಕೊಳ್ಳುತ್ತವೆ. ಹೀಗಾಗಿ, ಲೇಖನಗಳು ಸಾರ್ಥಕತೆ ಪಡೆದಿವೆ’ ಎಂದು ಪ್ರಶಂಸಿಸಿದ್ದಾರೆ.
ಕವಿ, ಕತೆಗಾರ ಮಹಿಪಾಲರೆಡ್ಡಿ ಮುನ್ನೂರು ಅವರು ಸೇಡಂನಲ್ಲಿ 1971ರ ನವೆಂಬರ್ 18 ರಂದು ಜನಿಸಿದರು. ಸಾಹಿತ್ಯ, ನಾಟಕ, ಪತ್ರಿಕೋದ್ಯಮ, ಸಿನಿಮಾ, ಚಿತ್ರಕಲೆ ಅವರ ಆಸಕ್ತಿಯ ಕ್ಷೇತ್ರ. ಮೂರು ಕವನ ಸಂಕಲನ, ಒಂದು ಕಥಾ ಸಂಕಲನ, ಐದು ಅಂಕಣ ಬರಹಗಳ ಸಂಕಲನ, 3 ಮಾಧ್ಯಮ ಸಂಬಂಧಿತ ಕೃತಿಗಳು, ಒಂದು ನಾಟಕ, ಒಂದು ಮಕ್ಕಳ ಕವನ ಸಂಕಲನ, ಎರಡು ಚರಿತ್ರೆ, 6 ಸಂಪಾದನೆ ಸೇರಿದಂತೆ 37 ಪುಸ್ತಕಗಳ ಪ್ರಕಟವಾಗಿವೆ. ‘ಲಕ್ಕಿ ನಂಬರ್, ಸಾಕ್ಷಿಕಲ್ಲು, ಜೋಕುಮಾರಸ್ವಾಮಿ, ಅಳಿಯ ದೇವರು, ಸಾಹೇಬರು ಬರುತ್ತಾರೆ’ ಮುಂತಾದ ನಾಟಕಗಳಲ್ಲಿ, ಮೂರು ಧಾರಾವಾಹಿಗಳಲ್ಲಿ , ಐದು ಸಿನಿಮಾ ಗಳಲ್ಲಿ, ದೂರದರ್ಶನ ನಾಟಕಗಳಲ್ಲಿ ಹಾಗೂ ...
READ MORE