‘ಮಾಧ್ಯಮ’ ಅಮ್ಮಸಂದ್ರ ಸುರೇಶ್ ಅವರ ಕೃತಿಯಾಗಿದೆ. ಖಾಸಗಿ ಗೌಪ್ಯತೆಯನ್ನು ಕದಿಯುವವರಿದ್ದಾರೆ ಎಚ್ಚರ, ದತ್ತಾಂಶ ಕಳವಿನಿಂದ ಸ್ವಾರ್ಟ್ ಫೋನ್ ರಕ್ಷಿಸಿಕೊಳ್ಳುವುದು ಹೇಗೆ? ಸುಸ್ಥಿರ ಅಭಿವೃದ್ಧಿಗೆ ತೊಡಕಾಗಿರುವ ಡಿಜಿಟಲ್ ವಿಭಜನೆ, ನಕಲಿ ಟಿಆರ್ಪಿ ಎಂಬ ಮೋಸದ ಜಾಲ ಲೇಖನಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಭಾರತೀಯ ಪತ್ರಿಕೋದ್ಯಮದ ಪಿತಾಮಹ ನಾಡಿಗ ಕೃಷ್ಣಮೂರ್ತಿ, ಅವಿಸ್ಮರಣೀಯ ಪತ್ರಕರ್ತ ಎಚ್.ಆರ್.ನಾಗೇಶ್ ರಾವ್, ಮಹಾನ್ ಪತ್ರಕರ್ತ ಮಹಾತ್ಮ ಗಾಂಧೀಜಿ ಅವರ ವ್ಯಕ್ತಿಚಿತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ಆರೋಗ್ಯಕರವಾಗಿರಬೇಕಾದರೆ ಮಾಧ್ಯಮಗಳು ಅತ್ಯಾವಶ್ಯಕ. ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಏಕೆಂದರೆ ಮಾಧ್ಯಮಗಳು ಅನೇಕ ಹಗರಣಗಳನ್ನು ಬಹಿರಂಗಪಡಿಸಿದ, ಹತ್ತು-ಹಲವು ಸಮಸ್ಯೆಗಳಿಗೆ ಪರಿಹಾರ ಕೊಡಿಸಿದ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಪ್ರಸ್ತುತ ಪತ್ರಕರ್ತರು ತಾವು ಯಾವುದೇ ಪೂರ್ವಾಗ್ರಹ, ಸ್ವಾರ್ಥ, ಧರ್ಮ ಅಥವಾ ರಾಜಕೀಯ ಪಕ್ಷಗಳ ಪರವಾಗಿ ನಿಲ್ಲದೆ ಸಮಚಿತ್ತದಿಂದ, ವೃತ್ತಿಧರ್ಮಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತಿದದ್ದೇವೆಯೇ? ಎಂದು ಆತ್ಮವಿಮರ್ಶೆ ಮಾಡಿಕೊಂಡರೆ ಪ್ರಜಾಪ್ರಭುತ್ವ ಮತ್ತು ಪ್ರಜೆಗಳಿಗೆ ಅನುಕೂಲವಾಗುತ್ತದೆ. ಮುದ್ರಣ, ವಿದ್ಯುನ್ಮಾನ, ಪ್ರಸಾರ, ನವ ಮಾಧ್ಯಮ - ಹೀಗೆ ಎಲ್ಲ ಬಗೆಯ ಮಾದ್ಯಮಗಳ ಬಗ್ಗೆ ಈ ಕೃತಿಯಲ್ಲಿ ಮಾಹಿತಿ ಇದೆ. ಹೀಗಾಗಿ ಇದು ಪತ್ರಕರ್ತರಿಗೆ ಮಾತ್ರವಲ್ಲದೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೂ ಅತ್ಯುತ್ತಮವಾದ ಆಕರ ಗ್ರಂಥವಾಗಲಿದೆ. ಅಮ್ಮಸಂದ್ರ ಸುರೇಶ್ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಪತ್ರಿಕೋದ್ಯಮದ ಬಗ್ಗೆ ಅವರಿಗಿರುವ ಕಾಳಜಿ ಶ್ಲಾಘನೀಯ, ಈ ತುಡಿತದಿಂದಾಗಿಯೇ ಅವರು ಮುದ್ರಣ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ. ಅವರಿಂದ ಮತ್ತಷ್ಟು ಕೃತಿಗಳು ಹೊರಬರಲಿ, ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡುವುದೇ ಮಾನದಂಡವಾಗಲಿ ಎಂಬ ಆಶಯ ಮತ್ತು ನಿರೀಕ್ಷೆ ನನ್ನದು ಎಂದು ಅಂಶಿ ಪ್ರಸನ್ನಕುಮಾರ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಅಮ್ಮಸಂದ್ರ ಸುರೇಶ್ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರು ಅಮ್ಮಸಂದ್ರ ಪೂರೈಸಿ, ಪದವಿ (ಪತ್ರಿಕೋದ್ಯಮ,ಮನೋವಿಜ್ಞಾನ ಮತ್ತು ಐಚ್ಛಿಕ ಕನ್ನಡ)-ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರಿನಲ್ಲಿ, ಹಾಗೂ ಸ್ನಾತಕೋತ್ತರ ಪದವಿ ಮಾಸ್ಟರ್ ಆಫ್ ಸೈನ್ಸ್ ಇನ್ ಕಮ್ಯುನಿಕೇಷನ್ಸ್, ಬೆಂಗಳೂರು ವಿಶ್ವವಿದ್ಯಾಲ ಪೂರ್ಣಗೊಳಿಸಿದರು. ಪಿ,ಹೆಚ್ ಡಿಯನ್ನು ಮಾಧ್ಯಮ ತಜ್ಞರಾದ ಪ್ರೊ.ಎನ್ ಉಷಾರಾಣಿಯವರ ಮಾರ್ಗದರ್ಶನದಲ್ಲಿ “ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ವರದಿ ಹಾಗೂ ಇನ್ನಿತರೆ ಬರಹಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ...
READ MORE